ಪಿಪಿಇ ಕಿಟ್ ಧರಿಸಿದ ನಾಲ್ವರು ಮಹಿಳೆಯರು ನೇಪಾಳದ ರಾಜಧಾನಿ ಕಠ್ಮಂಡುವಿನ ಪಶುಪತಿ ಶವಾಗಾರದಲ್ಲಿ ಕೊರೊನಾ ಸಂತ್ರಸ್ತೆಯ ಶವವನ್ನ ಎತ್ತಿ ಅದನ್ನ ಅಂತ್ಯಸಂಸ್ಕಾರ ನಡೆಸುವ ಕಾರ್ಮಿಕರ ಕೈಗೆ ಹಸ್ತಾಂತರಿಸಿದ್ದಾರೆ. ಸಂಪ್ರದಾಯವಾದಿ ದೇಶದಲ್ಲಿ ಮಹಿಳೆಯರು ಈ ಕೆಲಸ ಮಾಡಿರೋದ್ರ ಬಗ್ಗೆ ವ್ಯಾಪಕ ಸುದ್ದಿ ಹರಿದಾಡುತ್ತಿದೆ.
ನೇಪಾಳದಲ್ಲಿ ಮಹಿಳೆಯರು ಮೃತದೇಹವನ್ನ ಸ್ಪರ್ಶಿಸೋಕೆ ನಿಷೇಧವಿದೆ. ಆದರೆ ಬಹುಸಂಖ್ಯಾತ ಹಿಂದೂ ದೇಶವು 2006ರಲ್ಲಿ ಒಂದು ದಶಕಗಳ ಕಾಲ ನಡೆದ ಸಂಘರ್ಷದಿಂದಾಗಿ ಹಳೆಯ ರಾಜಪ್ರಭುತ್ವವನ್ನ ರದ್ದುಗೊಳಿಸಿದ ಬಳಿಕ ಮಹಿಳೆಯರ ಹಕ್ಕುಗಳು ಸುಧಾರಿಸಿವೆ.
ಕಾಠ್ಮಂಡುವಿನಲ್ಲಿ ಸದ್ಯ ಶವವನ್ನ ಹೊರಲು ಮಹಿಳೆಯರನ್ನ ನೇಮಿಸಲಾಗಿದೆ. ಇಲ್ಲಿಯವರೆಗೆ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಕೆಲಸವನ್ನ ಮಾಡಲು ಮಹಿಳೆಯರಿಗೂ ಅವಕಾಶ ಸಿಕ್ಕಿದ್ದಕ್ಕೆ ತುಂಬಾನೇ ಸಂತಸವಾಗ್ತಿದೆ ಅಂತಾ 25 ವರ್ಷದ ಯುವತಿಯರಾದ ಕಾರ್ಪೋರಲ್, ರಾಚಾನಾ ಹೇಳಿದ್ರು.