alex Certify 17 ವರ್ಷದ ಹುಡುಗ ಈಗ ಇಂಟರ್ನೆಟ್ ʼಸೆನ್ಸೇಷನ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

17 ವರ್ಷದ ಹುಡುಗ ಈಗ ಇಂಟರ್ನೆಟ್ ʼಸೆನ್ಸೇಷನ್ʼ

ಜೋರ್ಡಾನ್‌ನ 17 ವರ್ಷದ ಅಡಮ್ ಮೇಝೆನ್ ಹೆಸರಿನ ಹುಡುಗನೊಬ್ಬ ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದರೂ ಸಹ ತನ್ನ ಸಕ್ರಿಯ ಜೀವನದ ಮೂಲಕ ಆನ್ಲೈನ್‌ನಲ್ಲಿ ದೊಡ್ಡ ಸೆನ್ಸೇಷನ್ ಆಗಿದ್ದಾನೆ.

ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಟಿಕ್‌ಟಾಕ್ ‌ನಲ್ಲಿ ಜನಪ್ರಿಯನಾಗಿರುವ ಈತ ಅಲ್ಲಿ ತನ್ನ ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾನೆ. ಈತನ ಸಹೋದರ ಮೊಹಮ್ಮದ್ ಮಝೆನ್ ಅಬು ಕ್ಯಾಮೆರಾ ಹಿಡಿದುಕೊಂಡು ತನ್ನ ತಮ್ಮ ಮಾಡುವ ಎಲ್ಲವನ್ನೂ ಸೆರೆ ಹಿಡಿಯುತ್ತಿದ್ದಾನೆ.

ಕುಕಿಂಗ್ ಟ್ಯುಟೋರಿಯಲ್‌ ಗಳನ್ನು ನಡೆಸಿಕೊಡುವ ಅಡಮ್, ತನ್ನ ವೀಕ್ಷಕರಿಗೆ ಎಂಜಾಯ್ ಮಾಡಲು ಅನೇಕ ರೀತಿಯ ಹೊಸ ಭ್ಯಕ್ಷ್ಯಗಳನ್ನು ಮಾಡುವುದು ಹೇಗೆ ಎಂದು ತೋರಿಸಿಕೊಡುತ್ತಾನೆ. ಆತ ಆಗಾಗ ದೇಶದ ಸುತ್ತ ಟ್ರಾವೆಲಿಂಗ್ ಮಾಡಿಕೊಂಡು ಪ್ರತಿಯೊಂದನ್ನೂ ಬಹಳ ವಿವರವಾಗಿ ತನ್ನ ವಿಡಿಯೋದಲ್ಲಿ ಸೆರೆ ಹಿಡಿಯುತ್ತಾ ಬಂದಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...