ಬ್ರೆಜಿಲ್ ನ ಸರ್ಫರ್ ಮಾಯಾ ಗೆಬೆಯ್ರಾ ಅದ್ಭುತವಾದದ್ದೊಂದನ್ನು ಸಾಧಿಸಿದ್ದಾರೆ. 73.5 ಅಡಿ (22.4 ಮೀಟರ್) ಎತ್ತದ ಅಲೆಯೊಂದನ್ನು ಏರಿ ಸರ್ಫಿಂಗ್ ಮಾಡುವ ಮೂಲಕ ಮಾಯಾ ತಮ್ಮದೇ ಹಿಂದಿನ ದಾಖಲೆಯೊಂದನ್ನು ಅಳಿಸಿ ಹಾಕಿದ್ದಾರೆ.
ಈ ಹಿಂದೆ, 2018ರಲ್ಲಿ 68 ಅಡಿ ಎತ್ತರದ ಅಲೆಯೊಂದನ್ನು ಏರುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಮಾಯಾ. ಇದೀಗ ತಮ್ಮದೇ ದಾಖಲೆಯನ್ನು ಐದು ಅಡಿಗಳ ಅಂತರದಲ್ಲಿ ಉತ್ತಮಪಡಿಸಿಕೊಂಡಿದ್ದಾರೆ.
ಮಾಯಾರ ಈ ದಾಖಲೆಯ ವಿಡಿಯೋವನ್ನು ಗಿನ್ನೆಸ್ ವಿಶ್ವ ದಾಖಲೆಗಳ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಪೋರ್ಚುಗಲ್‌ನ ನಝಾರೆಯಲ್ಲಿ ಮಾಯಾ ಸರ್ಫಿಂಗ್ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.