ಕೊರೊನಾದಿಂದಾಗಿ ಕಾರ್ಮಿಕರ ಸಂಖ್ಯೆಯನ್ನ ಕಡಿಮೆ ಮಾಡಲು ರೈತರು ಮುಂದಾಗಿರುವ ಬೆನ್ನಲ್ಲೇ ಬ್ರೆಜಿಲ್ ಹಂದಿ ಆಹಾರ ವಿತರಣಾ ರೊಬೋಟ್ಗೆ ಬೇಡಿಕೆ ಹೆಚ್ಚಾಗಿದೆ. ಈ ರೋಬೋಟ್ ಹಂದಿಗಳಿಗೆ ಆಹಾರ ವಿತರಣೆ ಮಾಡುವ ವೇಳೆ ಶಾಸ್ತ್ರೀಯ ಸಂಗೀತವನ್ನ ನುಡಿಸುತ್ತದೆ.
ರೊಬೋಟ್ನ್ನು ಮಾರಾಟ ಮಾಡುವ ಖಾಸಗಿ ಒಡೆತನದ ಕಂಪನಿಯಾದ ರೋಬೋಗ್ರೋ ಪ್ರತಿ ತಿಂಗಳಿಗೆ ಸರಾಸರಿ 400ರಷ್ಟು ಬೇಡಿಕೆ ಹೆಚ್ಚಾಗಿದೆ ಅಂತಾ ಖಾಸಗಿ ಮಾಧ್ಯಮಕ್ಕೆ ಮಾಹಿತಿ ನೀಡಿದೆ.
ಈ ಯಂತ್ರಗಳು ಹಂದಿಗಳಿಗೆ ಅಗತ್ಯ ಪ್ರಮಾಣದ ಆಹಾರವನ್ನ ವಿತರಿಸುತ್ತೆ. ಹಂದಿಗಳು ಆಹಾರ ಸೇವಿಸುವ ವೇಳೆಯಲ್ಲಿ ಶಾಸ್ತ್ರೀಯ ಸಂಗೀತವನ್ನ ನುಡಿಸುತ್ತದೆ. ಇದರಿಂದ ಹಂದಿಗಳಿಗೆ ಒತ್ತಡ ಕಡಿಮೆಯಾಗುತ್ತೆ, ಇದರಿಂದ ಹಂದಿಗಳ ಗುಣಮಟ್ಟವೂ ಉತ್ತಮವಾಗುತ್ತೆ ಎಂದು ಕಂಪನಿ ಹೇಳಿದೆ.
ಇದು ಹಂದಿಗಳಿಗೆ ಒತ್ತಡ ಕಡಿಮೆ ಮಾಡೋದ್ರ ಜೊತೆಗೆ ಹಂದಿ ಸಾಕಣಿಕಾ ಕೇಂದ್ರಗಳಲ್ಲಿ ಮಾನವರ ಉಪಸ್ಥಿತಿಯನ್ನೂ ಕಡಿಮೆ ಮಾಡುತ್ತದೆ ಎಂದು ರೋಬೋಗ್ರೋ ನಿರ್ದೇಶಕ ಜಿಯೋವಾನಿ ಮೋಲಿನ್ ಹೇಳಿದ್ದಾರೆ.