ಬಹಳ ಭಾವುಕವಾದ ವಿಡಿಯೋವೊಂದು ನೆಟ್ಟಿಗರ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ.
ಬ್ರೆಝಿಲ್‌ನ ಪ್ರಖ್ಯಾತ ಪಿಯಾನೋ ವಾದಕ ಕಾರ್ಲೋಸ್ ಮಾರ್ಟಿನ್ಸ್, ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ವಿಶೇಷ ಗ್ಲೌವ್ಸ್ ಧರಿಸಿಕೊಂಡು ಪಿಯಾನೋ ನುಡಿಸುತ್ತಿರುವುದನ್ನು ಕಾಣಬಹುದಾಗಿದೆ. ಹೀಗೆ ಮಾಡುತ್ತಾ ಭಾವುಕರಾದ ಕಾರ್ಲೋಸ್ ಕಣ್ಣುಗಳು ತೇವಗೊಂಡವು.
ಹೃದಯ ಸಂಬಂಧಿ ಸಮಸ್ಯೆಗಳಿದ್ದ ಕಾರಣದಿಂದ ಮಾರ್ಟಿನ್ಸ್‌ಗೆ ಪಿಯಾನೋ ನುಡಿಸಲು ಕಳೆದ ಕೆಲ ತಿಂಗಳುಗಳಿಂದ ಸಾಧ್ಯವಾಗುತ್ತಿರಲಿಲ್ಲ. ಆದರೂ ಸಹ ನಿಯೋಪ್ರೀನ್ ಕವರ್ ಆಗಿರುವ ಬಯಾನಿಕ್ ಗ್ಲೌವ್ಸ್ ಧರಿಸಿರುವ ಮಾರ್ಟಿನ್ಸ್ ತಮ್ಮ ಪ್ರೀತಿಯ ಕೆಲಸವನ್ನು ಮಾಡುತ್ತಿದ್ದಾರೆ. NBAನಲ್ಲಿ ಪ್ರಖ್ಯಾತ ಆಟಗಾರರಾದ ರೆಕ್ಸ್ ಚಾಪ್‌ಮನ್ ಇದೇ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://www.instagram.com/p/CFb35S8nP0N/?utm_source=ig_web_copy_link