alex Certify ಕೋವಿಡ್​ ರೋಗಿಗಳ ಮಾನಸಿಕ ಖಿನ್ನತೆಗೆ ಪರಿಹಾರ ಕಂಡುಹಿಡಿದ ನರ್ಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ರೋಗಿಗಳ ಮಾನಸಿಕ ಖಿನ್ನತೆಗೆ ಪರಿಹಾರ ಕಂಡುಹಿಡಿದ ನರ್ಸ್​..!

ಕೋವಿಡ್​ 19 ಸೋಂಕು ದೃಢಪಟ್ಟ ಬಳಿಕ ಅನಿವಾರ್ಯವಾಗಿ ಐಸೋಲೇಟ್​ ಆಗಬೇಕಾಗುತ್ತೆ. ಈ ಸಮಯದಲ್ಲಿ ಕುಟುಂಬಸ್ಥರು ತುಂಬಾನೇ ನೆನಪಾಗ್ತಾರೆ. ಇದರಿಂದ ಮಾನಸಿಕ ಖಿನ್ನತೆ ಉಂಟಾಗಬಹುದು.

ಕೊರೊನಾ ಉಂಟಾದ ರೋಗಿಗೆ ವೈದ್ಯರು ಹಾಗೂ ನರ್ಸ್​ ಸಂಪರ್ಕ ಬಿಟ್ಟು ಮತ್ಯಾರ ಜೊತೆಯೂ ಮಾತನಾಡುವಂತೆ ಇರೋದಿಲ್ಲ. ಹೀಗಾಗಿ ಈ ಕಠಿಣ ಸಂದರ್ಭದಲ್ಲಿ ವೈದ್ಯರು ತುಂಬುವ ಆತ್ಮವಿಶ್ವಾಸವೊಂದೇ ರೋಗಿಗೆ ಸಿಗುವ ಧೈರ್ಯವಾಗಿರುತ್ತೆ.

ಬ್ರೆಜಿಲ್​​ನಲ್ಲಿ ನರ್ಸ್ ಒಬ್ಬರು ಕೊರೊನಾ ರೋಗಿಗಳಿಗೆ ಒಂಟಿಯೆಂದು ಎನಿಸಬಾರದು ಎಂದು ಮಾಡಲಿಕ್ಕೋಸರ ಹೊಸ ಪ್ಲಾನ್​ ಒಂದನ್ನ ಕಂಡು ಹಿಡಿದಿದ್ದಾರೆ. ಇದಕ್ಕಾಗಿ ಆಕೆ ದೊಡ್ಡ ತಂತ್ರಜ್ಞಾನವನ್ನೇನೂ ಬಳಸಿಲ್ಲ. ಬದಲಾಗಿ ಗ್ಲೌಸ್​ಗೆ ನೀರನ್ನ ತುಂಬಿ ಅದನ್ನ ರೋಗಿಯ ಕೈಗೆ ನೀಡಿದ್ದಾರೆ. ಇದರಿಂದ ರೋಗಿಗಳು ಏಕಾಂಗಿ ಭಾವದಿಂದ ಕೊಂಚ ಹೊರಬಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...