ಕೋವಿಡ್‌ನಿಂದ ಲಾಕ್‌ಡೌನ್ ಆಗಿ ಜಗತ್ತಿನಾದ್ಯಂತ ಜನರು ಬೇಸತ್ತು ಹೋಗಿದ್ದಾರೆ. ಮನೆಗಳಲ್ಲೇ ಬಂಧಿಯಾಗಿರುವುದು ಹುಚ್ಚು ಹಿಡಿದಂತೆ ಆಗುತ್ತಿರುವ ಕಾರಣ ಆಚೆ ಬಂದು ಜಗತ್ತು ನೋಡಲು ಮನಸ್ಸುಗಳು ಹಾತೊರೆಯುತ್ತಿವೆ.
ಇವೆಲ್ಲದರ ನಡುವೆ ಬ್ರೆಜಿಲ್‌ನ ಸಾವೋ ಪೌಲೋ ನಗರದ ನಿವಾಸಿಯೊಬ್ಬರು ಬೀಚ್ ಪ್ರದೇಶವನ್ನು ಮುಚ್ಚಿದ್ದರಿಂದ ಸಿಟ್ಟಿಗೆದ್ದು, ಇದರ ವಿರುದ್ಧ ಪ್ರತಿಭಟಿಸಲು ಹೆಣ್ಣಿನ ಗೊಂಬೆಯೊಂದನ್ನು ಅಲ್ಲಿ ಇಟ್ಟು ಮೋಜು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಜುಡಿತ್ ಹೆಸರಿನ ಈ ಗೊಂಬೆ ಹ್ಯಾಟ್ ಒಂದನ್ನು ಧರಿಸಿಕೊಂಡು ನಗರದ ಪ್ರಾಯಾ ಗ್ರಾಂಡೇ ಕಡಲತೀರದಲ್ಲಿ ನಿಂತಿದೆ.
ಅಪರೂಪದ ತಪ್ಪಿಗೂ ಸಿಕ್ತು ಭಾರೀ ಬೆಲೆ…..!
ಈ ಗೊಂಬೆಯನ್ನು ನಿಜವಾದ ವ್ಯಕ್ತಿ ಎಂದು ಭಾವಿಸಿದ ಪೊಲೀಸರು ಆ ಜಾಗಕ್ಕೆ ಬಂದು ನೋಡಿದ್ದಾರೆ. ಆದರೆ ಅದೊಂದು ಗೊಂಬೆ ಎಂದು ತಿಳಿದ ಬಳಿಕ ಅವರಿಗೂ ನಗು ತಡೆಯಲು ಆಗಲಿಲ್ಲ. ಘಟನೆಯ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಶೇರ್ ಮಾಡಲಾಗಿದೆ.
ಈ ರೀತಿಯ ಪ್ರಾಂಕ್ ಮಾಡಿದ ಕಾರಣಕ್ಕೆ ಯುವಕನನ್ನು ಪೊಲೀಸರು ಬಂಧಿಸಿದ್ದು, ಆರೋಗ್ಯ ಭದ್ರತೆಗೆಂದು ಜಾರಿಗೆ ತರಲಾಗಿದ್ದ ಕಾನೂನಿನ ಉಲ್ಲಂಘನೆ ಮಾಡಿದ ಆರೋಪ ಹೊರಿಸಿದ್ದಾರೆ. ಗೊಂಬೆಯನ್ನು ಬೀಚ್ ಬಳಿ ಇಡಲು ಹೋದಾಗ 29 ವರ್ಷದ ಈ ವ್ಯಕ್ತಿ ಭದ್ರತಾ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿದ್ದಾನೆ.