ಕೊಲಂಬಿಯಾ: ಪುಟ್ಟ ನಾಯಿಯೊಂದು ತನಗಿಂತ 10 ಪಟ್ಟಿಗಿಂತ ದೊಡ್ಡದಾದ ಕರಡಿಯನ್ನು ಬೆನ್ನಟ್ಟಿದ ವಿಡಿಯೋವೊಂದು ವೈರಲ್ ಆಗಿದೆ. ಒಬ್ಬರನ್ನು ಎದುರಿಸಲು ಗಾತ್ರವಲ್ಲ ಧೈರ್ಯ ಮುಖ್ಯ ಎಂಬುದನ್ನು ಈ ವಿಡಿಯೋ ಸಾಬೀತು ಮಾಡಿದೆ.
ಕೆನಡಾ ಕೊಲಂಬಿಯಾದ ಬ್ರಿಟಿಷ್ ಕಾಂಕ್ವಿಟ್ಲಂ ಎಂಬಲ್ಲಿ ಘಟನೆ ನಡೆದಿದ್ದು, ನಾಯಿಯ ಮಾಲೀಕ ಡೇವಿಡ್ ಜಾನ್ಸನ್ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.
“ಇದು ಕಾಳಗ ಮಾಡಲು ನಾಯಿಯ ಗಾತ್ರದ್ದಲ್ಲ. ಆದರೆ, ಜಾಕ್ ರುಸೆಲ್ ಅಥವಾ ಜರ್ಸಿ ಎಂದು ಕರೆಯುವ ನಾಯಿ ಮನೆಯ ಕಂಪೌಂಡ್ ಒಳಗೆ ಬಂದಿದ್ದ ಕರಡಿಯನ್ನು ಹೆದರಿಕೆ ಬಿಟ್ಟು ಬೆನ್ನಟ್ಟಿದೆ” ಎಂದು ಕ್ಯಾಪ್ಶನ್ ನೀಡಿದ್ದಾರೆ.
ಮನೆಯ ಹಿಂದಿನ ಕಂಪೌಂಡ್ ಒಳಗೆ ಬಂದ ದೊಡ್ಡ ಕಪ್ಪು ಕರಡಿಯನ್ನು ಸಣ್ಣ ಬಿಳಿ ನಾಯಿ ಬಾಲ ಅಲ್ಲಾಡಿಸುತ್ತ ಎಡಬಿಡದೇ ಕೂಗಿ ಹೆದರಿಸುತ್ತದೆ. ಅದರ ಕೂಗಿಗೇ ಹೆದರಿದ ಕರಡಿ ತಪ್ಪಿಸಿಕೊಂಡು ಓಡಲಾರಂಭಿಸುತ್ತದೆ. ನಾಯಿ ಕರಡಿಯನ್ನು ಕಂಪೌಂಡ್ ದಾಟುವವರೆಗೂ ಬೆನ್ನಟ್ಟುತ್ತದೆ. ವಿಡಿಯೋವನ್ನು 19 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.