ಲಡಾಖ್ ಗಾಲ್ವನ್ ಕಣಿವೆಯಲ್ಲಿ ನಡೆದ ಘಟನೆಯ ನಂತರ ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಇದೇ ಸಂದರ್ಭದಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಆಂದೋಲನ ತೀವ್ರಗೊಂಡಿದೆ.
ಅಗ್ಗದ ವಸ್ತುಗಳ ಆಮದಿಗೆ ಕೇಂದ್ರ ಸರ್ಕಾರ ಕೂಡ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಮೂಲಕ ಚೀನಾಗೆ ಆರ್ಥಿಕ ಹೊಡೆತ ನೀಡಲು ಚಿಂತನೆ ನಡೆಸಿದೆ. ಆದರೆ, ಚೀನಾದ ಒನ್ ಪ್ಲಸ್ ಕಂಪನಿಯ ಸ್ಮಾರ್ಟ್ ಫೋನ್ ಒನ್ ಪ್ಲಸ್ 8 ಪ್ರೊ ಮಾರಾಟ ಪ್ರಾರಂಭವಾದ ಕೆಲವೇ ನಿಮಿಷದಲ್ಲಿ ಅಮೆಜಾನ್ ನಲ್ಲಿ ಖರೀದಿಸಲು ಲಭ್ಯವಿಲ್ಲದಂತಾಗಿದೆ.
ಜೂನ್ 18 ರಂದು ಅಮೆಜಾನ್ ಇಂಡಿಯಾ ಮೂಲಕ ಮಾರಾಟ ಪ್ರಾರಂಭವಾದ ಕೆಲವೇ ನಿಮಿಷದಲ್ಲಿ ಒನ್ ಪ್ಲಸ್ 8 ಪ್ರೊ ಚೀನಾ ಸ್ಮಾರ್ಟ್ ಫೋನ್ ಗಳು ಸೇಲ್ ಆಗಿವೆ. ಚೀನಾದ ಸ್ಮಾರ್ಟ್ ಫೋನ್, ಸರಕು. ಉಪಕರಣ, ಉತ್ಪನ್ನ ದೇಶಾದ್ಯಂತ ಬಹಿಷ್ಕರಿಸಬೇಕು ಎಂಬ ಒತ್ತಾಯ ಕೇಳಿ ಬಂದಿರುವ ಸಂದರ್ಭದಲ್ಲಿಯೇ ಒನ್ ಪ್ಲಸ್ 8 ಪ್ರೊ ಸ್ಮಾರ್ಟ್ ಫೋನ್ ಭರ್ಜರಿ ಸೇಲ್ ಆಗುವ ಮೂಲಕ ಅಚ್ಚರಿ ಮೂಡಿಸಿದೆ.