ಎರೋಸ್ಪೇಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡೋದು ಅಂದ್ರೆ ಸುಲಭವೇನಲ್ಲ. 18ರಿಂದ 25 ವರ್ಷ ವಯಸ್ಸಿನವರು ಈ ಕೋರ್ಸ್ನ ಕಲಿಯೋಕೆ ಸಮರ್ಥರು ಎನ್ನುತ್ತೆ ನಮ್ಮ ಎಜ್ಯುಕೇಷನ್ ಸಿಸ್ಟಮ್. ಆದರೆ 12 ವರ್ಷದ ಬಾಲಕನೊಬ್ಬ ಏರೋಸ್ಪೇಸ್ ಇಂಜಿನಿಯರಿಂಗ್ ಕಲೀತಾ ಇದಾನೆ ಅಂದ್ರೆ ನೀವು ನಂಬಲೇ ಬೇಕು.
12 ವರ್ಷದ ಮಕ್ಕಳು ಏಳನೇ ತರಗತಿ ವ್ಯಾಸಂಗ ಮಾಡೋದು ಕಾಮನ್. ಆದರೆ ಅಮೆರಿಕದ ಕ್ಯಾಲೇಬ್ ಆಂಡರ್ಸನ್ ಎಂಬ ಹೆಸರಿನ 12ರ ಪೋರ ಏರೋಸ್ಪೇಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡ್ತಿದ್ದಾನೆ.
ಉತ್ತಮ ಕಲಿಕಾ ಸಾಮರ್ಥ್ಯ ಹೊಂದಿರೋ ಈತ ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಕೇವಲ 9 ತಿಂಗಳ ಮಗುವಿದ್ದಾಗ ಕ್ಯಾಲೇಬ್ ಗಣಿತದ ಕಷ್ಟದ ಲೆಕ್ಕಗಳನ್ನ ಬಿಡಿಸುತ್ತಿದ್ದನಂತೆ.
ಕಾಲೇಜಿನ ಅನುಭವ ಹೇಗಿದೆ ಅಂತಾ ಈ ಪುಟ್ಟ ಪೋರನನ್ನ ಕೇಳಿದ್ರೆ…..ನನ್ನ ಸಹಪಾಠಿಗಳೆಲ್ಲ ನನಗಿಂತ ಎತ್ತರ ಇದ್ದಾರೆ. ನನಗೆ ನೆನಪಿನ ಶಕ್ತಿ ಜಾಸ್ತಿ ಇರೋದ್ರಿಂದ ಇದೆಲ್ಲ ಸಾಧ್ಯವಾಯ್ತು ಅಂತಾ ಹೇಳ್ತಾನೆ.
ಇತ್ತ ಜಾರ್ಜಿಯಾ ವಿಶ್ವವಿದ್ಯಾಲಯ ಕೂಡ ಈತನ ಕಲಿಕಾ ಸಾಮರ್ಥ್ಯವನ್ನ ಗುರುತಿಸಿದೆ. ಆಂಡರ್ಸನ್ ಪುಟ್ಟ ಹುಡುಗ ಎಂದು ಕಡೆಗಣನೆ ಮಾಡದೇ, ಈತನಿಗೆ ಉಳಿದ ವಿದ್ಯಾರ್ಥಿಗಳ ರೀತಿಯಲ್ಲೇ ಶಿಕ್ಷಣವನ್ನ ನೀಡುತ್ತಿದೆ.