ಹೊಟ್ಟೆಯೊಳಗೆ ಮ್ಯಾಗ್ನೆಟಿಕ್ ಬಾಲ್ಸ್ ಇದ್ದರೆ ತನ್ನಲ್ಲಿ ಕಾಂತೀಯ ಶಕ್ತಿ ಬರುತ್ತದೆ ಎಂಬ ಭ್ರಮೆಯಲ್ಲಿ ಹುಡುಗನೊಬ್ಬ ಬರೋಬ್ಬರಿ 54 ಮ್ಯಾಗ್ನೆಟಿಕ್ ಬಾಲ್ ಗಳನ್ನು ನುಂಗಿದ್ದಾನೆ.
ವಿಜ್ಞಾನ, ಪ್ರಯೋಗಗಳಲ್ಲಿ ಅತೀವ ಆಸಕ್ತಿಯುಳ್ಳ ಯುಕೆಯ ರಿಲೇ ಮಾರಿಸನ್ ಎಂಬಾತ ಮ್ಯಾಗ್ನೆಟಿಕ್ ಬಾಲ್ಸ್ ನುಂಗಿದ್ದು, ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.
ಹೊಟ್ಟೆಯೊಳಗೆ ಈ ಬಾಲ್ಸ್ ಇದ್ದರೆ, ಕಬ್ಬಿಣದ ಮತ್ತಿತರೆ ವಸ್ತುಗಳನ್ನ ಸೆಳೆಯುತ್ತದೆ ಅಥವಾ ಅದರ ಸೆಳೆತಕ್ಕೆ ತಾನು ಒಳಗಾಗುತ್ತೇನಾ ಎಂಬ ಪ್ರಯೋಗ ಮಾಡಲು ಹೋಗಿ ಎಡವಟ್ಟು ಮಾಡಿದ್ದಾನೆ.
ಶವ ಪರೀಕ್ಷೆ ವೇಳೆ ಅಪರೂಪದ ʼಕಲ್ಲಿನ ಹೃದಯʼ ಪತ್ತೆ
ಮೊದಲಿಗೆ ಒಂದಷ್ಟು ಬಾಲ್ಸ್ ನುಂಗಿದ 12 ವರ್ಷದ ಮಾರಿಸನ್, ಯಾವುದೇ ಕಾಂತೀಯ ಶಕ್ತಿ ಕಾಣದ್ದರಿಂದ ನಾಲ್ಕು ದಿನಗಳ ನಂತರ ಮತ್ತಷ್ಟು ಬಾಲ್ಸ್ ನುಂಗಿದ್ದಾನೆ. ಮಲದ ಮೂಲಕ ಹೇಗಿದ್ದರೂ ಹೊರ ಬರುತ್ತದೆ ಎಂದು ಕಾದಿದ್ದಾನೆ. ಆದರೆ, ಹೊಟ್ಟೆಯೊಳಗಿದ್ದ ಬಾಲ್ಸ್ ಬರಲೇ ಇಲ್ಲ.
ಗಾಬರಿಗೊಂಡು ತಾಯಿಗೆ ವಿಷಯ ತಿಳಿಸಿದ್ದಾನೆ. ಆಕಸ್ಮಿಕವಾಗಿ ನುಂಗಿದ್ದಾಗಿ ಹೇಳಿದ ಆತನ ಮಾತು ಕೇಳಿ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದು, ಸ್ಕ್ಯಾನ್ ಮಾಡಿದಾಗ 25-30 ಬಾಲ್ಸ್ ಕಾಣಿಸಿತ್ತು. ಸತತ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ 54 ಬಾಲ್ಸ್ ಹೊರತೆಗೆಯಲಾಯಿತು.