alex Certify ದಂಗಾಗಿಸುತ್ತೆ 5 ಸೆಕೆಂಡ್​ ಫ್ರೀ ಶಾಪಿಂಗ್ ​ನಲ್ಲಿ ಬಾಲಕ ಆರಿಸಿಕೊಂಡ ವಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ 5 ಸೆಕೆಂಡ್​ ಫ್ರೀ ಶಾಪಿಂಗ್ ​ನಲ್ಲಿ ಬಾಲಕ ಆರಿಸಿಕೊಂಡ ವಸ್ತು

ಶಾಪಿಂಗ್​ ಅಂದ್ರೆ ಯಾರಿಗ್​ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ತಿಂಡಿ ಖರೀದಿ ಮಾಡೋದು ಅಂದ್ರಂತೂ ಮಕ್ಕಳು ಮುಂದೆ ನಿಲ್ತಾರೆ. ಆದರೆ ನಿಮಗೆ 5 ಸೆಕೆಂಡ್​ನಲ್ಲಿ ಶಾಪಿಂಗ್​ ಮಾಡಿ ಮುಗಿಸು ಅಂದ್ರೆ ನಿಮ್ಮ ದೃಷ್ಟಿ ಮೊದಲು ಯಾವ ವಸ್ತು ಮೇಲೆ ಹೋಗಬಹುದು..? ಇದೇ ಪರಿಸ್ಥಿತಿಯಲ್ಲಿದ್ದ ಬಾಲಕನೊಬ್ಬ ಈ ಅವಧಿಯಲ್ಲಿ ಆರಿಸಿಕೊಂಡ ವಸ್ತುಗಳನ್ನ ನೋಡಿದ್ರೆ ನೀವು ದಂಗಾಗಿ ಹೋಗ್ತಿರಾ.

ಒಂದು ಶಾಪಿಂಗ್​ ಸ್ಟೋರ್​ನಲ್ಲಿ ಬಾಲಕನಿಗೆ 5 ಸೆಕೆಂಡ್​ಗಳ ಕಾಲ ಫ್ರೀ ಶಾಪಿಂಗ್​ ಮಾಡೋಕೆ ಅವಕಾಶ ನೀಡಲಾಗಿದೆ. ಆತ ಮೊದಲು ಬಾಳೆಹಣ್ಣು, ಕುರುಕಲು ತಿಂಡಿಯನ್ನ ಎತ್ತಿಕೊಂಡಿದ್ದಾನೆ. ಇನ್ನೇನು ಸಮಾಯಾವಕಾಶ ಮುಗೀತು ಅನ್ನೋವಷ್ಟರಲ್ಲಿ ಆತನ ಕಣ್ಣು ಐಫೋನ್​ನ ದುಬಾರಿ ಏರ್​ಪಾಡ್​ ಮೇಲೆ ಬಿದ್ದಿದೆ. ಕೂಡಲೇ ಆತ ಅದನ್ನ ಆರಿಸಿಕೊಂಡಿದ್ದಾನೆ. ಬಾಲಕನ ಈ ಚಾಣಾಕ್ಷ ಬುದ್ಧಿ ನೆಟ್ಟಿಗರನ್ನ ಮಂತ್ರಮುಗ್ದರನ್ನಾಗಿಸಿದೆ.

https://www.instagram.com/p/CG71wPbDv0E/?utm_source=ig_web_copy_link

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...