
ತನ್ನ ಪುಟ್ಟ ತಂಗಿಯನ್ನು ನಾಯಿಯಿಂದ ರಕ್ಷಿಸಲು ಮುಂದಾದ 6 ವರ್ಷ ಪೋರನೊಬ್ಬ ಆ ನಾಯಿಯ ದಾಳಿಗೆ ಮೈ ತುಂಬಾ ಸ್ಟಿಚ್ ಹಾಕಿಸಿಕೊಳ್ಳುವಂತಾದ ಘಟನೆ ಅಮೆರಿಕ ವ್ಯೋಮಿಂಗ್‌ನಲ್ಲಿ ಘಟಿಸಿದೆ.
ಬ್ರಿಡ್ಜರ್ ಹೆಸರಿನ ಈ ಬಾಲಕ, ತನ್ನ ತಂಗಿ ಮೇಲೆ ದಾಳಿ ಮಾಡಲು ಬರುತ್ತಿದ್ದ ನಾಯೊಂದನ್ನು ಕಂಡು, ತನ್ನ ಸುರಕ್ಷತೆಯ ಬಗ್ಗೆ ಸ್ವಲ್ಪವೂ ಯೋಚಿಸದೇ, ನಾಯಿಯ ಹಾದಿಗೆ ತನ್ನನ್ನು ತಾನೇ ಒಡ್ಡಿಕೊಂಡು ಆಕೆಯನ್ನು ರಕ್ಷಿಸಿದ್ದಾನೆ.
ಬ್ರಿಡ್ಜರ್‌ನ ಅತ್ತೆ ಈ ಸಾಹಸದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಬಾಲಕನನ್ನು ಹೀರೋ ಎಂದು ಕರೆದಿದ್ದಾರೆ. ನಾಯಿಯ ದಾಳಿಗೆ ತುತ್ತಾದ ಬಾಲಕನಿಗೆ ಪ್ಲಾಸ್ಟಿಕ್ ಸರ್ಜನ್ ಒಬ್ಬರು 90 ಸ್ಟಿಚ್‌ಗಳನ್ನು ಹಾಕಿದ್ದು, ಆತನೀಗ ಸುಧಾರಿಸಿಕೊಳ್ಳುತ್ತಿದ್ದಾನೆ.
https://www.instagram.com/p/CCgWxh4ABi-/?utm_source=ig_embed
https://www.instagram.com/p/CCjDnLngOYO/?utm_source=ig_embed