
ನೆರೆಹೊರೆಯವರ ನಡುವಿನ ಆಸ್ತಿ ಪಾಸ್ತಿ ವಿವಾದಗಳು ವರ್ಷಗಟ್ಟಲೇ ಇತ್ಯರ್ಥವಾಗದೇ ಬಹಳ ತಲೆನೋವು ತಂದಿಡುವುದು ಭಾರತದಲ್ಲಿ ಮಾತ್ರವಲ್ಲ ಅಮೆರಿಕದಲ್ಲೂ ಇದೆ.
ಇಲ್ಲಿನ ನಿವಾಸಿಯೊಬ್ಬರು ತಮ್ಮ ಪಕ್ಕದ ಮನೆಯವರ ಗ್ಯಾರೇಜ್ ಅನ್ನು ಅರ್ಧಕ್ಕೆ ಕಟ್ ಮಾಡಿದ್ದಾರೆ. ಪಕ್ಕದ ಮನೆಯವ ತನಗೆ ಸೇರಿದ್ದ ಜಮೀನಿನಲ್ಲಿ ತನ್ನ ಗ್ಯಾರೇಜ್ ಕಟ್ಟಿಕೊಂಡಿದ್ದ ಕಾರಣ, ಗ್ಯಾಬ್ರಿಯಲ್ ಬ್ರಾನ್ ಎಂಬ ನಿರ್ಮಾಣ ಕಾರ್ಮಿಕ, ಖುದ್ದು ತಾನೇ ಎಲೆಕ್ಟ್ರಿಕ್ ಗರಗಸವೊಂದನ್ನು ಬಳಸಿ ಹೀಗೆ ಮಾಡಿದ್ದಾನೆ.
ಮರದಲ್ಲಿ ಕಟ್ಟಲಾಗಿದ್ದ ಈ ಗ್ಯಾರೇಜ್ ಅನ್ನು ಸರಿಯಾಗಿ ಅರ್ಧಕ್ಕೆ ಕಟ್ ಮಾಡಲಾಗಿದ್ದು, ಇದರ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.