ಮಹಿಳೆಯರಲ್ಲಿ ಋತುಬಂಧಕ್ಕೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ಆಗಾಗ ನಡೆಯುತ್ತಿರುತ್ತವೆ. ಆದ್ರೆ ಪುರುಷರ ಋತುಬಂಧದ ಬಗ್ಗೆ ವಿಶೇಷ ಚರ್ಚೆಯಾಗುವುದಿಲ್ಲ.ಅನೇಕರಿಗೆ ಈ ವಿಷ್ಯ ತಿಳಿದಿರುವುದಿಲ್ಲ.
ಒಂದು ವಯಸ್ಸಿನ ನಂತರ, ಪುರುಷರಿಗೂ ಈ ಸಮಸ್ಯೆ ಕಾಡುತ್ತದೆ. ಋತುಬಂಧವನ್ನು ಸಾಮಾನ್ಯವಾಗಿ ಖಿನ್ನತೆ, ಲೈಂಗಿಕ ಶಕ್ತಿಯ ಕೊರತೆ ಮತ್ತು ಇತರ ದೈಹಿಕ ಮತ್ತು ಮಾನಸಿಕ ಲಕ್ಷಣಗಳೆಂದು ಪರಿಗಣಿಸಲಾಗುತ್ತದೆ. ಈ ಲಕ್ಷಣಗಳು 50 ವರ್ಷ ವಯಸ್ಸಿನ ಪುರುಷರಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಮೋನೋಪೋಜ್ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಿ, ಲೈಂಗಿಕ ಬಯಕೆಯನ್ನು ಹೆಚ್ಚಿಸಲು, ಇತ್ತೀಚಿನ ದಿನಗಳಲ್ಲಿ ಪುರುಷರು ಇಂಜೆಕ್ಷನ್ ಪಡೆಯುತ್ತಿದ್ದಾರೆ.
ಪುರುಷರ ಲೈಂಗಿಕ ಪ್ರಚೋದನೆಯಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಪ್ರಮುಖ ಪಾತ್ರ ವಹಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಪುರುಷರಲ್ಲಿ ಲೈಂಗಿಕ ಹಾರ್ಮೋನುಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. 2004 ರಲ್ಲಿ ನಡೆದ ಅಧ್ಯಯನದಲ್ಲಿ,1987ಕ್ಕೆ ಹೋಲಿಸಿದ್ರೆ, ಸರಾಸರಿ 60 ವರ್ಷ ವಯಸ್ಸಿನ ಅಮೆರಿಕನ್ ಪುರುಷರಿಗೆ ಟೆಸ್ಟೋಸ್ಟೆರಾನ್ ಮಟ್ಟ ಶೇಕಡಾ 17 ರಷ್ಟು ಕಡಿಮೆಯಾಗಿದೆ ಎಂಬುದು ಕಂಡು ಬಂದಿದೆ.
ಅಂಚೆ ಕಚೇರಿ ಖಾತೆಯಿಂದ ಹಣ ವಿತ್ ಡ್ರಾ ಮಾಡುವುದು ಈಗ ಮತ್ತಷ್ಟು ಸುಲಭ
ಕಡಿಮೆ ಟೆಸ್ಟೋಸ್ಟೆರಾನ್‌ಗೆ ಕಾರಣವೇನು ಎಂಬುದರ ಕುರಿತು ಸಂಶೋಧಕರು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ ಯುವಕರು ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ. ಲಂಡನ್ ನಲ್ಲಿ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿರುವ ಡೇನಿಯಲ್ ಕೆಲ್ಲಿ 28 ನೇ ವಯಸ್ಸಿನಲ್ಲಿ ಕಡಿಮೆ ಟೆಸ್ಟೋಸ್ಟೆರಾನ್ ನಿಂದ ಬಳಲುತ್ತಿದ್ದರು.
ಈ ಸಮಸ್ಯೆಯಿಂದ ಹೊರ ಬರಲು ಜನರು ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಪ್ರತಿ ತಿಂಗಳು ಒಂದು ಇಂಜೆಕ್ಷನ್ ತೆಗೆದುಕೊಳ್ಳಬೇಕಾಗುತ್ತದೆ.