ಅಮೆರಿಕ ಅಧ್ಯಕ್ಷರು ಎಂದರೆ ಜಗತ್ತಿನ ಮಾಧ್ಯಮಗಳ ಕಣ್ಣುಗಳು ಹಾಗೂ ಕಿವಿಗಳು ಸದಾ ಅವರ ಮೇಲೆ ನಿಗಾ ಇಟ್ಟಿರುತ್ತವೆ. ಅವರು ಮಾತನಾಡುವಾಗ ಅಪ್ಪಿ ತಪ್ಪಿ ಆಗುವ ಒಂದೊಂದು ಲೋಪದೋಷಗಳನ್ನೂ ಸಹ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿಬಿಡುತ್ತವೆ ಮಾಧ್ಯಮಗಳು.
ಅಧ್ಯಕ್ಷ ಟ್ರಂಪ್ ಸಹ ಸಾಕಷ್ಟು ಬಾರಿ ಮಾತನಾಡುವಾಗ ಮಾಡಿಕೊಂಡ ಪ್ರಮಾದಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಾ ಬಂದಿದ್ದಾರೆ.
ಇಂಥದ್ದೇ ಒಂದು ಘಟನೆಯಲ್ಲಿ, ನೇಪಾಳ ಹಾಗೂ ಭೂತಾನ್ ಗಳು ಭಾರತದ ಭಾಗವೆಂದು ಟ್ರಂಪ್ ಭಾವಿಸಿದ್ದರು ಎಂದು ತಿಳಿದುಬಂದಿದೆ. ವಿಶ್ವದ ದೊಡ್ಡಣ್ಣ ದೇಶದ ಅಧಿಪತಿಯಾದವರೇ ಹೀಗೆ ಭೌಗೋಳಿಕ ಜ್ಞಾನವಿಲ್ಲದೇ ಮಾತನಾಡಿದರೆ ಹೇಗೆ ಎಂದು ಸಾಕಷ್ಟು ಟ್ರೋಲ್ ಗೂ ಈಡಾಗಿದ್ದಾರೆ ಟ್ರಂಪ್.
2018ರಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಫಿನ್ಲೆಂಡ್ನ ಹೆಲ್ಸಿಂಕಿಯಲ್ಲಿ ಹಮ್ಮಿಕೊಂಡಿದ್ದ ಸಭೆಯೊಂದರಲ್ಲಿ ಭಾಗವಹಿಸಿದ್ದ ಟ್ರಂಪ್, ಫಿನ್ಲೆಂಡ್ ರಷ್ಯಾದ ಭಾಗವೇ ಎಂದು ತಮ್ಮ ಸಲಹೆಗಾರರನ್ನು ಕೇಳಿದ್ದರಂತೆ. ಈ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಕೂಡಲೇ ಸಾಕಷ್ಟು ಟ್ರೋಲ್ ಹಾಗೂ ಮೆಮೆಗಳು ಟ್ರಂಪ್ ಹೆಸರಿನಲ್ಲಿ ತೇಲಲು ಆರಂಭಿಸಿವೆ.
https://twitter.com/JacksonTenori/status/1273578564667846657?ref_src=twsrc%5Etfw%7Ctwcamp%5Etweetembed%7Ctwterm%5E1273578564667846657&ref_url=https%3A%2F%2Fwww.timesnownews.com%2Fthe-buzz%2Farticle%2Fbook-claims-trump-once-asked-his-aides-if-finland-was-part-of-russia-see-how-netizens-reacted%2F608472
https://twitter.com/Earth58466352/status/1273589272755482624?ref_src=twsrc%5Etfw%7Ctwcamp%5Etweetembed%7Ctwterm%5E1273589272755482624&ref_url=https%3A%2F%2Fwww.timesnownews.com%2Fthe-buzz%2Farticle%2Fbook-claims-trump-once-asked-his-aides-if-finland-was-part-of-russia-see-how-netizens-reacted%2F608472