
ಬಾಂಡ್ ಗರ್ಲ್ ಎಂದೇ ಖ್ಯಾತರಾದ ಟಾನ್ಯಾ ರಾಬರ್ಟ್ಸ್ ತಮ್ಮ 65ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ರಾಬಟ್ಸ್ ಮೃತಪಟ್ಟಿದ್ದಾರೆ ಎಂದು ತಪ್ಪಾಗಿ ಘೋಷಿಸಲಾಗಿದ್ದ ಕೆಲವೇ ಗಂಟೆಗಳಲ್ಲಿ ಅವರು ನಿಜಕ್ಕೂ ನಿಧನರಾಗಿದ್ದಾರೆ.
ಟಾನ್ಯಾ ಪ್ರಚಾರಕ ಮೈಕ್ ಪಿಂಗೆಲ್ ಖುದ್ದು ತಮ್ಮ ಮಡದಿಯ ಸಾವಿನ ಸುದ್ದಿಯನ್ನು ಭಾನುವಾರ ಪ್ರಕಟಿಸಿದ್ದರು. ಟಾನ್ಯ ಪತಿ ಲ್ಯಾನ್ಸ್ ಒ’ಬ್ರಿಯಾನ್ ತಮ್ಮ ಮಡದಿ ಕಾಲವಾಗಿರುವುದಾಗಿ ಮೈಕ್‌ಗೆ ತಿಳಿಸಿದ್ದರು. ರಾಬರ್ಟ್ಸ್ ಮತಪಟ್ಟಿದ್ದಾರೆ ಎಂದು ಭಾನುವಾರವೇ ನ್ಯೂಸ್ ಏಜೆನ್ಸಿಗಳು ಬಿತ್ತರಿಸಿದ್ದವು.
ಈ ಬಗ್ಗೆ ಮಾತನಾಡಿದ ಪಿಂಗಲ್ ಒ’ಬ್ರಿಯಾನ್, ಇಲ್ಲಿನ ಸೆಡಾರ್ಸ್ ಸಿನಾಯ್ ವೈದ್ಯಕೀಯ ಕಾಲೇಜಿನಲ್ಲಿ ಮೂತ್ರಕೋಶದ ಗಾಯದಿಂದ ದಾಖಲಾಗಿದ್ದ ತಮ್ಮ ಮಡದಿ ಮೃತಪಟ್ಟ ವಿಚಾರವನ್ನು ಆಸ್ಪತ್ರೆ ಮೂಲಗಳು ಸೋಮವಾರ ಬೆಳಿಗ್ಗೆ 9:30ಕ್ಕೆ ತಮಗೆ ಅಧಿಕೃತವಾಗಿ ತಿಳಿಸಿವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.