ದೇಹ ಮಾರ್ಪಾಡು ಮಾಡಿಕೊಳ್ಳುವ ಅಭ್ಯಾಸ ಇರುವ ಕೆಲವರು ಒಮ್ಮೊಮ್ಮೆ ಯಾವ ಹಂತಕ್ಕೆ ಹೋಗಿ ಬಿಡ್ತಾರೆ ಅಂದರೆ ಅದನ್ನ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ.
ಗುರುತೇ ಸಿಗದರಷ್ಟರ ಮಟ್ಟಿಗೆ, ನೋಡಿದ್ರೆ ಭಯ ಆಗುವ ರೀತಿಯಲ್ಲಿ ದೇಹವನ್ನ ಮಾರ್ಪಾಡು ಮಾಡಿಕೊಳ್ತಾರೆ.
ಆಂಥೋನಿ ಲಾಫ್ರೆಡೋ ಎಂಬವರು ಕೂಡ ಈ ಆಸಕ್ತಿಯಿಂದಾಗಿ ಮುಖವನ್ನೇ ಹಾಳು ಮಾಡಿಕೊಂಡಿದ್ದಾರೆ.
32 ವರ್ಷದ ಈತ ತನ್ನ ದೇಹದ ತುಂಬೆಲ್ಲ ಎಷ್ಟರ ಮಟ್ಟಿಗೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ ಅಂದರೆ ಆತನಿಗೆ ಈಗ ಮಾತನಾಡೋಕೂ ಕಷ್ಟವಾಗ್ತಿದೆ.
ಹೀಗೆ ಮಾಡಿ ನಿಮ್ಮ ʼಸೌಂದರ್ಯʼ ಹೆಚ್ಚಿಸಿಕೊಳ್ಳಿ
ಕಪ್ಪು ಏಲಿಯನ್ನಂತೆ ಕಾಣಬೇಕೆಂದು ಈತ ತನ್ನ ಮೂಗು ಹಾಗೂ ಬಾಯಿಯನ್ನ ಮಾರ್ಪಾಡು ಮಾಡಿದ್ದು ಇದರಿಂದಾಗಿ ಈತನಿಗೆ ಮಾತನಾಡೋಕೆ ಕಷ್ಟವಾಗ್ತಿದೆ.