ಕೊರೋನಾ ವೈರಸ್‌ನ ಇನ್ನೊಂದು ಅವತಾರ ವ್ಯಾಪಿಸುವ ಭೀತಿಯಲ್ಲಿ ಅಪಾರ ಸಂಖ್ಯೆಯಲ್ಲಿ ಮಿಂಕ್‌ಗಳನ್ನು (ಮುಂಗೂಸಿ ಜಾತಿಗೆ ಸೇರಿದ ಜೀವಿ) ಡೆನ್ಮಾಕ್‌ನ ಆಡಳಿತ ಕೊಲ್ಲುತ್ತಿದೆ.
ಇಲ್ಲಿನ ಹೊಲ್ಸ್ಟೆಬ್ರೋ ಪ್ರದೇಶದಲ್ಲಿರುವ ಮಿಲಿಟರಿ ತರಬೇತಿ ಮೈದಾನದಲ್ಲಿ ಹೂಳಲಾಗಿದ್ದ ಸಾವಿರಾರು ಮಿಂಕ್‌ಗಳು ಒಮ್ಮೆಲೇ ಮೇಲೆ ಬಂದಿರುವುದು ಹೊಸ ಆತಂಕ ನೆಲೆಸಲು ಕಾರಣವಾಗಿದೆ.
ಮೃತ ಮಿಂಕ್‌ಗಳ ದೇಹಗಳು ಕೊಳೆತು ಅವುಗಳಿಂದ ಅನಿಲ ಬಿಡುಗಡೆಯಾಗಿ, ಆ ಅನಿಲದಿಂದ ಮಿಂಕ್‌ಗಳು ಮೇಲೆ ಬರುತ್ತಿವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಕೊಲ್ಲಲ್ಪಟ್ಟ ಮಿಂಕ್‌ಗಳನ್ನು ಕೆರೆಗಳ ಬಳಿ ಹೂಳಿರುವ ಕಾರಣ ಅಲ್ಲಿನ ನೀರಿನಲ್ಲಿ ರಂಜಕ ಹಾಗೂ ಸಾರಜನಕದ ಪ್ರಮಾಣಗಳು ಒಮ್ಮೆಲೆ ಏರಿಕೆಯಾಗುವ ಭೀತಿ ಈ ಊರಿನ ಜನರಲ್ಲಿ ನೆಲೆಸಿದೆ.
ಕೊರೋನಾ ವೈರಸ್‌ನ ಸಂಬಂಧಿಕ ವೈರಸ್ ಒಂದು ಹಬ್ಬುವುದನ್ನು ತಪ್ಪಿಸಲು ಅದಾಗಲೇ ಒಂದು ಕೋಟಿಗೂ ಹೆಚ್ಚು ಮಿಂಕ್‌ಗಳನ್ನು ಕೊಲ್ಲಲಾಗಿದೆ ಎಂದು ಡೆನ್ಮಾರ್ಕ್ ಸರ್ಕಾರ ಘೋಷಿಸಿದೆ.