![Blake Lively Photoshopped Shoes Onto Her Bare Feet and Put Internet Sleuths on Their Toes](https://images.news18.com/ibnlive/uploads/2020/10/1603454115_untitled-design-5.png)
ಹಾಲಿವುಡ್ ನಟಿ ಬ್ಲೇಕ್ ಲೈವ್ಲಿ ಇನ್ಸ್ಟಾಗ್ರಾಂನಲ್ಲಿ ಅಮೆರಿಕನ್ನರನ್ನ ಮತ ಚಲಾಯಿಸಲು ಪ್ರೇರೇಪಿಸಲು ಹೋಗಿ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ,
ಅಮೆರಿಕದಲ್ಲಿ ಚುನಾವಣೆಯಲ್ಲಿ ಮತ ಚಲಾಯಿಸಿ ಅಂತಾ ಬ್ಲೇಕ್ ಲೈವ್ಲಿ ತನ್ನ ಪತಿ ರಿಯಾನ್ ರೆನಾಲ್ಡ್ಸ್ ಜೊತೆಗಿನ ಫೋಟೋವೊಂದನ್ನ ತೆಗೆದು ಹಾಕಿದ್ರು. ಇದೇ ಫೋಟೋವನ್ನ ರಿಯಾನ್ ಕೂಡ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಾಕಿ ಜನರಿಗೆ ಮತ ಚಲಾಯಿಸುವಂತೆ ಮನವಿ ಮಾಡಿದ್ರು. ಆದರೆ ಇದೆರಡು ಫೋಟೋದಲ್ಲಿದ್ದ ಸಣ್ಣ ವ್ಯತ್ಯಾಸವೊಂದು ನೆಟ್ಟಿಗರ ಕಣ್ಣಿಗೆ ಕಂಡಿದೆ.
ಲೈವ್ಲಿ ಫೋಸ್ಟ್ ಮಾಡಿದ್ದ ಫೋಟೋದಲ್ಲಿ ಆಕೆಯ ಕಾಲಿನಲ್ಲಿ ಹೈ ಹೀಲ್ಡ್ ಚಪ್ಪಲಿ ಇದೆ. ಆದರೆ ರಿಯಾನ್ ಹಾಕಿದ್ದ ಫೋಟೋದಲ್ಲಿ ಆಕೆ ಚಪ್ಪಲಿ ಧರಿಸಿಲ್ಲ. ಆಕೆ ಫೋಟೋ ತೆಗೆದ ಬಳಿಕ ತನ್ನ ಕಾಲಿನ ಮೇಲೆ ಚಪ್ಪಲಿ ರೀತಿ ಚಿತ್ರ ಬಿಡಿಸಿಕೊಂಡಿದ್ದಾಳಾ ಅಂತಾ ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.