ಆಸ್ಟ್ರೇಲಿಯಾದ ಪ್ರಳಯಸ್ವರೂಪಿ ಕಾಳ್ಗಿಚ್ಚಿಗೆ ಮೂರು ಶತಕೋಟಿಯಷ್ಟು ಪ್ರಾಣಿಗಳು ಜೀವಂತ ಬೆಂದು ಹೋದ ಘಟನೆ ವರ್ಷ ಕಳೆದರೂ ಅದರ ನೆನಪು ಇನ್ನೂ ಹಾಗೇ ಇದೆ.
ವರ್ಷದ ಬಳಿಕ ಇಂಥದ್ದೇ ದೃಶ್ಯಾವಳಿಗಳು ದೂರದ ಚಿಲಿ ದೇಶದಲ್ಲಿ ಕಂಡು ಬರುತ್ತಿವೆ. ದೇಶಾದ್ಯಂತ ಬೆಂಕಿ ವ್ಯಾಪಕವಾಗಿ ಹಬ್ಬಿರುವ ಕಾರಣ ಆಗಸವೂ ಸಹ ಕೆಂಪಗೆ ಕಾಣುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕಾಳ್ಗಿಚ್ಚಿನ ದೃಶ್ಯಗಳು ರಾರಾಜಿಸುತ್ತಿದ್ದು, ಆಸ್ಟ್ರೇಲಿಯಾದ ದುರಂತವನ್ನು ಮತ್ತೆ ನೆನಪಿಗೆ ಬರುವಂತೆ ಮಾಡಿವೆ.
ಇಲ್ಲಿನ ವಲ್ಪರಾಸೋ ಪ್ರದೇಶವು ಕಳೆದ 10 ಗಂಟೆಗಳಿಂದ ನಿರಂತರವಾಗಿ ಹೊತ್ತಿ ಉರಿಯುತ್ತಿದ್ದು, ಉದ್ದೇಶಪೂರಿತವಾಗಿ ಈ ಕಾಳ್ಗಿಚ್ಚನ್ನು ಹಬ್ಬಿಸಲಾಗಿದೆ ಎಂದು ವರದಿಗಳು ತಿಳಿಸುತ್ತಿದ್ದು, ಕೆನ್ನಾಲಗೆಯ ಪ್ರಖರತೆಗೆ ಜನರು ತಂತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಜಾಗಗಳತ್ತ ಹೊರಟು ನಿಂತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಬ್ಲೇಡ್ ರನ್ನರ್ 2049ರ ದೃಶ್ಯ ನೆನಪಿಸುವಂತೆ, ಕೆನ್ನಾಲಗೆಯ ಮಟ್ಟವನ್ನು ನೋಡಬಹುದಾಗಿದೆ.
https://www.youtube.com/watch?v=kulYiFfDpu4&feature=emb_logo