ಬ್ಲ್ಯಾಕ್ ಮಿರರ್‌ನ ಮೆಟಲ್ ಹೆಡ್ ನಾಲ್ಕನೇ ಸೀಸನ್ ನಲ್ಲಿ ನೀವೆಲ್ಲ ರೋಬೋ ನಾಯಿಗಳ ಸೇವೆಯನ್ನು ನೋಡಿರುತ್ತೀರಾ. ಆದರೆ ನಿಜ ಜೀವನದಲ್ಲಿ ಇದು ಸಾಧ್ಯವೇ ಎನ್ನುವ ಪ್ರಶ್ನೆಗೆ ಹೌದು ಎನ್ನುವ ಉತ್ತರವನ್ನು ಅಮೆರಿಕ ವಾಯುಸೇನೆ ನೀಡಿದೆ.
ಈಗಾಗಲೇ ರೋಬೋ ನಾಯಿಯನ್ನು ಈಗಾಗಲೇ ಸಿಂಗಾಪುರದಲ್ಲಿ ವಿವಿಧ ಭಾಗದಲ್ಲಿ ನೇಮಿಸಲಾಗಿದೆ. ಆದರೀಗ ಅಮೆರಿಕ ವಾಯುಸೇನೆ, ನೆಲ್ಲೀಸ್ ವಾಯುನೆಲೆಯಲ್ಲಿ ರೋಬೋಟ್ ನಾಯಿಗಳನ್ನು ನೇಮಿಸಲಾಗಿದೆ ಎಂದು ಹೇಳಲಾಗಿದೆ. ನಾಲ್ಕು ಕಾಲಿನ ರೊಬೋಟ್ ಶ್ವಾನಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಮುಂದಿನ ಕೆಲವೇ ದಿನದಲ್ಲಿ ಮಾನವ ರಹಿತ ವಾಹನಗಳನ್ನು ಮಿಲಿಟರಿಗೆ ಸೇರಿಸಲು ಈಗಾಗಲೇ ಚಿಂತನೆ ನಡೆಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಇದಕ್ಕೂ ಮೊದಲು ಕೊರೋನಾ ಸಮಯದಲ್ಲಿ ಸಿಂಗಾಪುರದಲ್ಲಿ ಇದೇ ಸಂಸ್ಥೆಯ ರೋಬೋ ನಾಯಿಗಳಿಂದ, ಜನರಿಗೆ ಸಾಮಾಜಿಕ ಅಂತರ, ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಬಳಸಲಾಗಿತ್ತು. ಇದೀಗ ಈ ಶ್ವಾನಗಳನ್ನು ಸೇನೆಯಲ್ಲಿಯೂ ಬಳಸುತ್ತಿರುವುದರಿಂದ, ಮುಂದಿನ ದಿನದಲ್ಲಿ ರೋಬೋಗಳನ್ನು ಬಳಸಿಕೊಂಡು ಗಡಿಯನ್ನು ಕಾಯಬಹುದು ಎನ್ನುವ ಹೊಸ ಸಾಹಸಕ್ಕೆ ಅಮೆರಿಕ ಸೇನೆ ಮುಂದಾಗಿದೆ.