’Black Lives Matter’ ಪ್ರತಿಭಟನೆಗಳಿಗೆ ದಿನಕ್ಕೊಂದು ಕಲರ್‌ಫುಲ್ ರಂಗು ತುಂಬಲಾಗುತ್ತಿದೆ. ಇದೀಗ ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಮೇಯರ್ ಮುರಿಯಲ್ ಹೆಸರಿನಲ್ಲಿದ್ದ ಬೀದಿಯೊಂದಕ್ಕೆ Black Lives Matter ಬೀದಿ ಎಂದು ಮರುನಾಮಕರಣ ಮಾಡಲಾಗಿದೆ.
ಜೂನ್ 5ರಂದು ಈ ಬೀದಿಯುದ್ದಕ್ಕು ಹಳದಿ ಬಣ್ಣ ಲೇಪಿಸಿ Black Lives Matter ಎಂದು ಬರೆಯಲಾಗಿತ್ತು. ಇದೀಗ ಇದಕ್ಕೆ ಪೂರಕವಾಗಿ ಗೂಗಲ್ ಮ್ಯಾಪ್ಸ್ ಹಾಗೂ ಆಪಲ್ ಮ್ಯಾಪ್ಸ್ ಸೇವೆಗಳು ಸಹ ತಮ್ಮ ನಕ್ಷೆಗಳಲ್ಲಿ ಈ ಬೀದಿಯ ಹೆಸರನ್ನು Black Lives Matter ಎಂದು ಬದಲಿಸಿವೆ.
ಇದೇ ರೀತಿ Black Lives Matter ಎಂದು ಅಮೆರಿಕದ ಇತರ ನಗರಗಳಾದ ಓಕ್ಲಂಡ್, ಸಾಕ್ರಮಂಟೋ, ಡಲ್ಲಾಸ್ ಹಾಗೂ ಸ್ಯಾನ್ ಫ್ರಾನ್ಸಿಸ್ಕೋಗಳಲ್ಲೂ ಸಹ ಬರೆಯಲಾಗಿದೆ. ಆದರೆ ಸ್ಯಾನ್ ಫ್ರಾನ್ಸಿಸ್ಕೋ ಬೀದಿಗಳ ಹೆಸರನ್ನು ಗೂಗಲ್ ಇನ್ನೂ ಬದಲಿಸಿಲ್ಲ.