ಕೆಲವೇ ವಾರಗಳ ಹಿಂದೆ ಅಸ್ಪೃಶ್ಯತೆಯ ವಿರುದ್ಧ ದೂರಿದ್ದ ಕೃಷ್ಣವರ್ಣೀಯ ವೈದ್ಯರೊಬ್ಬರು ಮೃತಪಟ್ಟ ಘಟನೆ ಅಮೆರಿಕದಲ್ಲಿ ಜರುಗಿದೆ.
ಕೋವಿಡ್-19 ಸೋಂಕಿತರಾಗಿದ್ದ ಡಾ. ಸೂಸನ್ ಮೂರ್ ತಮಗಾದ ಅನುಭವವನ್ನು ಹೇಳುತ್ತಾ, ರೋಗಿಯೊಬ್ಬರ ಶುಶ್ರೂಷೆಗೆಂದು ಸೂಚಿಸಲಾಗಿದ್ದ ಔಷಧೋಪಚಾರಗಳನ್ನು ಒದಗಿಸಲು ಬಿಳಿ ಬಣ್ಣದ ಫಿಸಿಷಿಯನ್ ಒಬ್ಬರು ಹೇಗೆ ತಾರತಮ್ಯ ಮಾಡುತ್ತಿದ್ದರು ಎಂದು ವಿವರಿಸಿದ್ದರು.
ಇಂಡಿಯಾ ಆರೋಗ್ಯ ವಿವಿಯ ಆಸ್ಪತ್ರೆಯಲ್ಲಿ ತಮ್ಮ ಕಣ್ಣೆದುರು ಘಟಿಸಿದ ಘಟನೆಗಳನ್ನು ವಿಡಿಯೋ ಮಾಡಿ ಹಂಚಿಕೊಂಡ ಎರಡೇ ವಾರಗಳ ಒಳಗೆ ಮೂರ್ ನಿಧನರಾಗಿದ್ದಾರೆ.
ಖುದ್ದು ತಮಗೆ ಸೋಂಕು ತಗುಲಿದ್ದರೂ ಸಹ ಔಷಧೋಪಚಾರದ ವಿಚಾರದಲ್ಲಿ ತಮ್ಮ ವಿರುದ್ಧ ತಳೆದ ಧೋರಣೆಯನ್ನು ಸವಿವರವಾಗಿ ವಿವರಿಸಿದ್ದರು ಮೂರ್.
https://www.facebook.com/susan.moore.33671748/videos/3459156707536634/?t=2