ಅಮೆರಿಕದ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನದ ಮರದ ಮೇಲೆ ಕೂತ ಕಪ್ಪು ಕರಡಿಯೊಂದು ವಿಚಿತ್ರವಾಗಿ ಕೂಗಿದೆ. ಸುಮಾರು 1 ನಿಮಿಷಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ರೀತಿ ಹಾಡನ್ನ ಹಾಡ್ತಿರೋ ಕರಡಿ ಆರೋಗ್ಯಕರವಾಗಿದೆ. ಆದರೆ ಅದು ಮರದ ಮೇಲೆ ಹತ್ತಿ ಯಾಕೆ ಆ ರೀತಿ ಕೂಗ್ತಿತ್ತು ಅನ್ನೋದು ನಮಗೂ ಗೊತ್ತಿಲ್ಲ ಅಂತಾರೆ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು.
ಉದ್ಯಾನವನದ ಅಧಿಕಾರಿಗಳು ಟ್ವಿಟರ್ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದು ಕರಡಿ ತೊಂದರೆಗೀಡಾದಾಗ ಅಥವಾ ರಕ್ಷಣೆ ಬೇಕು ಎನಿಸಿದಾಗ ಈ ರೀತಿ ಕೂಗುತ್ತವೆ ಅಂತಾ ಅಂದಾಜಿಸಿದ್ದಾರೆ. ಸದ್ಯ ಈ ವಿಡಿಯೋ ಸಾವಿರಕ್ಕೂ ಹೆಚ್ಚು ವೀವ್ಸ್ ಹಾಗೂ ಕಾಮೆಂಟ್ಗಳನ್ನ ಪಡೆದುಕೊಂಡಿದೆ.
ಈ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 300-500 ಕರಡಿಗಳು ವಾಸಮಾಡುತ್ತಿವೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.