
ರಸ್ತೆಯಲ್ಲಿ ಹೋಗುವಾಗ ಕ್ರೂರ ಪ್ರಾಣಿ ನಿಮ್ಮನ್ನ ಅಟ್ಟಾಡಿಸಿಕೊಂಡು ಬಂದರೆ ಹೇಗೆ ಆಗಬೇಡ..! ಇದೊಂದು ಘಟನೆ ನಮ್ಮ ಜೀವನದಲ್ಲಿ ನಡೆಯೋದೇ ಬೇಡ ಅಂತಾ ಅನೇಕರು ಅಂದುಕೊಳ್ತಿರಬಹುದು.
ಆದರೆ ಇಂತಹ ಘಟನೆಗಳು ಜಗತ್ತಿನ ಒಂದಲ್ಲ ಒಂದು ಕಡೆ ನಡೆಯುತ್ತಲೇ ಇರುತ್ತೆ. ಕೆಲ ಅದೃಷ್ಟವಂತರು ಪ್ರಾಣಿಗಳ ಕೈನಿಂದ ಪಾರಾಗುವಲ್ಲಿ ಯಶಸ್ವಿಯಾದ್ರೆ ಇನ್ನೂ ಹಲವರು ಪ್ರಾಣಿಗಳ ಬಾಯಿಗೆ ಆಹಾರವಾಗಿದ್ದೂ ಇದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಇಳಿಜಾರಿನ ಮಾರ್ಗದಲ್ಲಿ ಬೈಕ್ ಸವಾರರೊಬ್ಬರನ್ನ ಕರಡಿಯೊಂದು ಅಟ್ಟಾಡಿಸಿದ್ದು ಅದೃಷ್ಟವಶಾತ್ ಬೈಕ್ ಸವಾರ ಕರಡಿ ಕೈನಿಂದ ಬಚಾವಾಗುವಲ್ಲಿ ಯಶಸ್ವಿಯಾಗಿದ್ದಾನೆ.
ಈ ಘಟನೆಯು ಮೊಂಟಾನಾದ ವೈಟ್ಫಿಶ್ ಎಂಬಲ್ಲಿ ನಡೆದಿದೆ. ಈ ವಿಡಿಯೋವನ್ನ ಮೊಂಟಾನಾ ಚಾಕು ತಯಾರಕ ಕಂಪನಿಯು ಫೇಸ್ಬುಕ್ನಲ್ಲಿ ಶೇರ್ ಮಾಡಿದೆ. ಮೊಂಟಾನಾ ಡಿಸ್ನಿ ಲ್ಯಾಂಡ್ ಅನ್ನೋದಕ್ಕೆ ಇದೊಂದು ಸಾಕ್ಷಿಯಾಗಿದೆ. ಕರಡಿಯೊಂದು ಪರ್ವತದ ಇಳಿಜಾರು ಮಾರ್ಗದಲ್ಲಿ ಬೈಕ್ ಸವಾರನನ್ನ ಅಟ್ಟಾಡಿಸಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಈ ಸಣ್ಣ ವಿಡಿಯೋ ಫೇಸ್ಬುಕ್ನಲ್ಲಿ ಮಿಲಿಯನ್ಗಟ್ಟಲೇ ವೀವ್ಸ್ ಸಂಪಾದಿಸಿದೆ.
https://www.facebook.com/MontanaKnifeCo/videos/224452852773255/?t=15