ನಗರ ಪ್ರದೇಶದ ಯಾಂತ್ರೀಕೃತ ಬದುಕಿನಿಂದ ಎಸ್ಕೇಪ್ ಆಗಿ ಪ್ರಶಾಂತವಾದ ವಾತಾವರಣದಲ್ಲಿ ಮನೆ ಮಾಡಿಕೊಂಡು ಏಕಾಂತದಲ್ಲಿ ಕಾಲ ಕಳೆಯುವ ಐಡಿಯಾ ಬಹಳಷ್ಟು ಜನರಿಗೆ ಇಷ್ಟ.
ಐಸ್‌ಲೆಂಡ್ ಬಳಿಯ ಎಲ್ಲಿರೇ ದ್ವೀಪದಲ್ಲಿ ಇರುವ ಏಕೈಕ ಮನೆಯ ಚಿತ್ರವೊಂದು ಜಗತ್ತಿನ ಅತ್ಯಂತ ಏಕಾಂತದ ಮನೆ ಎಂಬ ಹೆಗ್ಗಳಿಕೆ ಪಡೆದಿದೆ. ಎಲ್ಲಿರೇ ಬೇಟೆಗಾರರ ಸಂಘ ಈ ಕಾಟೇಜ್ ಮನೆಯನ್ನು ನಿರ್ಮಿಸಿದ್ದು, ಐಸ್‌ಲೆಂಡ್‌ನ ದಕ್ಷಿಣದಲ್ಲಿರುವ ಈ ದ್ವೀಪಕ್ಕೆ ಆಗಮಿಸುವ ಬೇಟೆಗಾರರಿಗೆ ಉಳಿದುಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ.
ಈ ದ್ವೀಪದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಫಿನ್‌ಗಳು ಇವೆ. ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಪಫಿನ್‌ಗಳು ಇದ್ದರೂ ಸಹ, ಐಸ್‌ಲೆಂಡ್‌ನಲ್ಲಿ ಈ ಪ್ರಾಣಿಗಳ ಬೇಟೆಗೆ ಯಾವುದೇ ನಿರ್ಬಂಧವಿಲ್ಲ.
ಇದೀಗ ಈ ನೀರವತೆಯ ನಡುವೆ ಇರುವ ಈ ಮನೆಯ ಚಿತ್ರವು ಎಲ್ಲೆಡೆ ವೈರಲ್ ಆಗಿದ್ದು, ಇಷ್ಟು ಏಕಾಂತದ ಮನೆಯಲ್ಲಿ ಯಾರಪ್ಪಾ ವಾಸ ಮಾಡೋದು ಎಂದು ನೆಟ್ಟಿಗರು ಅಚ್ಚರಿ ಪಡುವಂತಾಗಿದೆ.
https://twitter.com/MyBeauDes/status/1336566375649865728?ref_src=twsrc%5Etfw%7Ctwcamp%5Etweetembed%7Ctwterm%5E1336566375649865728%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fbjork-or-zombie-hunters-netizens-try-to-guess-who-lives-in-worlds-loneliest-house-in-iceland-3186500.html
https://twitter.com/Kevin53_/status/1336611877225422849?ref_src=twsrc%5Etfw%7Ctwcamp%5Etweetembed%7Ctwterm%5E1336611877225422849%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fbjork-or-zombie-hunters-netizens-try-to-guess-who-lives-in-worlds-loneliest-house-in-iceland-3186500.html
https://twitter.com/xoghead/status/1336762980315275265?ref_src=twsrc%5Etfw%7Ctwcamp%5Etweetembed%7Ctwterm%5E1336762980315275265%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fbjork-or-zombie-hunters-netizens-try-to-guess-who-lives-in-worlds-loneliest-house-in-iceland-3186500.html