ನಾನು ಹಾರುವ ತಟ್ಟೆಗಳನ್ನ ನೋಡಿದೆ, ಏಲಿಯನ್ಸ್ಗಳನ್ನ ನೋಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ತಿರುಗಾಡುವವರಿಗೇನು ಬರಗಾಲವಿಲ್ಲ. ಇದೀಗ ಇದೆ ಸಾಲಿಗೆ ಬ್ರಿಟನ್ 50 ವರ್ಷದ ಮಹಿಳೆಯೊಬ್ಬರು ಸೇರಿದ್ದು ಏಲಿಯನ್ಗಳಿಂದ ಹಲ್ಲೆಗೊಳಗಾಗಿದ್ದೇನೆ ಎಂದು ಹೇಳುವ ಮೂಲಕ ನೆಟ್ಟಿಗರ ಹುಬ್ಬೇರಿಸಿದ್ದಾಳೆ.
ಪಶ್ಚಿಮ ಯಾರ್ಕ್ಶೈರ್ನಲ್ಲಿರುವ ಬ್ರ್ಯಾಡ್ಫೋರ್ಡ್ ನಿವಾಸಿಯಾದ ಪೌಲಾ, ತಾನು 50ಕ್ಕೂ ಹೆಚ್ಚು ಬಾರಿ ಏಲಿಯನ್ಗಳನ್ನ ಸಂಪರ್ಕಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಇದಕ್ಕೆ ಸಾಕ್ಷಿ ಎಂಬಂತೆ ತನ್ನ ಮೈ ಮೇಲೆ ಕಲೆಗಳಿವೆ ಎಂದು ಹೇಳಿದ್ದಾಳೆ.
ಇದು ಮಾತ್ರವಲ್ಲದೇ ತಾನು ಹಾರುವ ತಟ್ಟೆಗಳ ಮೇಲೂ ಓಡಾಡಿದ್ದು ಭೂಮಿಯ ಮೇಲೆ ಟಚ್ ಸ್ಕ್ರೀನ್ ಡಿವೈಸ್ಗಳು ಬರೋಕೆ ಮುಂಚೆಯೇ ನಾನು ಅವುಗಳನ್ನ ಬಳಕೆ ಮಾಡಿದ್ದೆ ಎಂದು ಹೇಳಿದ್ದಾಳೆ.
ಟಚ್ ಸ್ಕ್ರೀನ್ ಡಿವೈಸ್ಗಳು ಮಾರುಕಟ್ಟೆಗೆ ಬರುವ ಮೊದಲೇ ನಾನು ಅವುಗಳನ್ನ ಕಂಡಿದ್ದೇನೆ. ನನಗೆ ಏಲಿಯನ್ಗಳು ಮೊದಲೇ ಈ ತಂತ್ರಜ್ಞಾನವನ್ನ ತೋರಿಸಿದ್ದವು. ಈ ಟಚ್ ಸ್ಕ್ರೀನ್ ಸಾಧನದ ಮೂಲಕ ಏಲಿಯನ್ಗಳು ನನಗೆ ಸುಂದರವಾದ ನದಿಯೊಂದು ಕಪ್ಪು ಬಣ್ಣಗೆ ತಿರುಗೋದನ್ನ ಹಾಗೂ ನೀಲಾಕಾಶ ಕೆಂಪು ಬಣ್ಣಕ್ಕೆ ತಿರುಗುತ್ತಿರೋದನ್ನ ತೋರಿಸಿದ್ದವು. ಮನುಷ್ಯನ ದುರಾಸೆಯಿಂದಾಗಿ ಭೂಮಿ ಯಾವ ರೀತಿ ನಾಶವಾಗಬಹುದು ಎಂಬುದನ್ನ ನಾನು ಆಗಲೇ ಅರಿತುಕೊಂಡಿದ್ದೆ ಎಂದು ಪೌಲಾ ಹೇಳಿದ್ದಾರೆ.
50 ವರ್ಷದ ಮಹಿಳೆ ತಮ್ಮ ಮೈಮೇಲೆ ಉಂಟಾಗಿರುವ ಕೆಲ ಕಲೆಗಳನ್ನ ತೋರಿಸಿದ್ದು ಇವೆಲ್ಲ ಏಲಿಯನ್ಗಳನ್ನ ಭೇಟಿಯಾದ ವೇಳೆ ಉಂಟಾದ ಗಾಯ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಅವುಗಳು ಹೇಗೆ ಕಾಣಿಸುತ್ತವೆ ಅನ್ನೋದನ್ನೂ ಬಿಡಿಸಿ ತೋರಿಸಿದ್ದಾರೆ.