ವರ್ಜಿನಿಯಾದ ವನ್ಯಜೀವಿ ನಿರ್ವಹಣೆ ಸಂಸ್ಥೆ ಅರ್ಧಚಂದ್ರಾಕಾರ ತಲೆಯುಳ್ಳ ಹಾವೊಂದನ್ನ ಪತ್ತೆ ಮಾಡಿದೆ. ಅಲ್ಲದೇ ಇಂತಹ ಹಾವನ್ನ ಹಿಂದೆಂದೂ ಕಂಡಿರಲಿಲ್ಲ ಅಂತಾ ಹೇಳಿಕೆ ನೀಡಿದೆ. ಮಿಡ್ಲೋಥಿಯಾನ್ ಎಂಬಲ್ಲಿ ಈ ವಿಚಿತ್ರ ಹಾವು ಪತ್ತೆಯಾಗಿದೆ.
ಫೇಸ್ಬುಕ್ನಲ್ಲಿ ಹಾವಿನ ಫೋಟೋ ಶೇರ್ ಮಾಡಿರುವ ಸಂಸ್ಥೆ, ಈ ಹಾವಿನ ಗುರುತನ್ನ ಪತ್ತೆ ಹಚ್ಚೋಕೆ ನೆಟ್ಟಿಗರ ಸಹಾಯ ಕೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಇದೇ ವರ್ಜಿನಿಯಾದಲ್ಲಿ ಪತ್ತೆಯಾದ ಎರಡು ತಲೆಯ ತಾಮ್ರ ಬಣ್ಣದ ಹಾವಿನ ಮತ್ತೊಂದು ಪ್ರಭೇದವಾ ಇದು ಅಂತಾ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಹಾವು ಯಾವುದು ಅಂತಾ ಯಾರಿಗಾದರೂ ಮಾಹಿತಿ ಇದ್ದಲ್ಲಿ ದಯಮಾಡಿ ಕಮೆಂಟ್ ಮಾಡಿ ಅಂತಾ ಬರೆದಿದ್ದಾರೆ .
ಈ ಪೋಸ್ಟ್ ಹಾಕಿದ ಕೆಲ ಸಮಯದ ಬಳಿಕ ಈ ಹಾವಿನ ಪ್ರಭೇಧ ಗುರುತಿಸುವಲ್ಲಿ ವನ್ಯಜೀವಿ ನಿರ್ವಹಣಾ ಸಂಸ್ಥೆ ಯಶಸ್ವಿಯಾಗಿದೆ. ಆಗ್ನೇಯ ಏಷ್ಯದಲ್ಲಿ ಕಾಣಸಿಗುವ ಈ ಆಕ್ರಮಣಕಾರಿ ಹಾವನ್ನ ಹ್ಯಾಮರ್ ಹೆಡ್ ವರ್ಮ್ (ಸುತ್ತಿಗೆ ತಲೆಯ ಹಾವು) ಎಂದು ಗುರುತಿಸಲಾಗಿದೆ ಅಂತಾ ಮತ್ತೊಂದು ಪೋಸ್ಟ್ ಮಾಡಿದೆ.