ಬ್ರಿಟನ್ ಕಡಲ ತೀರದಲ್ಲಿ ಕಂಡುಬಂದಿರುವ ಈ ಸಮುದ್ರ ಜೀವಿಗಳು ನೆಟ್ಟಿಗರನ್ನು ಆಕರ್ಷಿಸಿವೆ. ಉತ್ತರ ವೇಲ್ಸ್ ಬಳಿ ತಮ್ಮ ಕುಟುಂಬದೊಂದಿಗೆ ಹಾಲಿಡೇ ಮಾಡುತ್ತಿದ್ದ ಮಾರ್ಟಿನ್ ಗ್ರೀನ್, ಮರದ ತುಂಡಂತೆ ಕಂಡ ವಸ್ತುವೊಂದನ್ನು ಕಂಡು ಅತ್ತ ಹೆಜ್ಜೆಯಿಟ್ಟಿದ್ದಾರೆ.
ಅದೇನು ಎಂದು ಹತ್ತಿರಕ್ಕೆ ಹೋಗಿ ನೋಡಿದಾಗ ಆ ತೇಲು ಹಲಗೆ ಮೇಲೆ ಸಾವಿರಾರು ಪುಟ್ಟ ಪುಟ್ಟ ಜೀವಿಗಳು ಅಂಟಿಕೊಂಡಿರುವುದು ಕಂಡುಬಂದಿದೆ. ಗ್ರೀನ್ ತಮ್ಮ ಫೇಸ್ಬುಕ್ ಖಾತೆಯ ಮೂಲಕ ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ಜೀವಿಗಳ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಮಾಡಿದ ಗ್ರೀನ್ ಹಾಗೂ ಅವರ ಪುತ್ರನಿಗೆ ಅವು ಗೂಸ್‌ನೆಕ್ಡ್ ಬಾರ್ನಕಲ್‌ಗಳು ಎಂದು ತಿಳಿದುಬಂದಿದೆ. ಈ ಜೀವಿಗಳಿಗೆ ಪೋರ್ಚುಗಲ್ ಹಾಗೂ ಸ್ಪೇನ್‌ನಲ್ಲಿ ಭಾರೀ ಡಿಮ್ಯಾಂಡ್ ಇದೆ ಎಂದು ತಿಳಿದುಬಂದಿದೆ. ಗ್ರೀನ್‌ಗೆ ಸಿಕ್ಕ ಈ ಬಾರ್ನಕಲ್‌ಗಳಿಗೆ 50 ಸಾವಿರ ಪೌಂಡ್‌ಗಳು (48 ಲಕ್ಷ ರೂ.ಗಳು) ಸಿಗುವ ಸಾಧ್ಯತೆ ಇದೆ.
https://www.facebook.com/martyn.green.904/posts/10158506554707068