ಜಲರಾಶಿಯಲ್ಲಿ ಏನೆಲ್ಲಾ ಜೀವಿಗಳು ಇವೆ ಎಂದು ಅರಿಯಲು ಎಷ್ಟು ಸಮಯವಾದರೂ ಸಾಲದು. ಒಮ್ಮೊಮ್ಮೆ ಅಪರಿಚಿತ ಜೀವಿಗಳು ಕಡಲ ತೀರಕ್ಕೆ ಬಂದು ಮಾನವರ ಕಣ್ಣಿಗೆ ಬೀಳುತ್ತವೆ.
ಇವುಗಳಲ್ಲಿ ಬಹಳಷ್ಟು ಗೊತ್ತಿರುವ ತಳಿಯ ಜೀವಿಗಳೇ ಆಗಿದ್ದರೂ ಕೆಲವೊಂದು ಜೀವಿಗಳು ಅದೇ ಮೊದಲ ಬಾರಿಗೆ ಮಾನವರ ಕಣ್ಣಿಗೆ ಬಿದ್ದಿರುತ್ತವೆ. ಇಂಥದ್ದೇ ಒಂದು ಘಟನೆ ಹಿಂದೂ ಮಹಾಸಾಗರದಲ್ಲಿ ಇತ್ತೀಚಿಗೆ ಘಟಿಸಿದೆ.
ಕೋರ್ಟ್ ಆವರಣದಲ್ಲಿ ಸೆಲ್ಫಿ ತೆಗೆದುಕೊಂಡವನಿಗೆ ಬಿಗ್ ಶಾಕ್
ಹೊಸ ರೀತಿಯ ಜೀವಿಯೊಂದು ಸಾಗರದ 3700 ಅಡಿ ಆಳದಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋ ಫುಟೇಜ್ ಒಂದರಲ್ಲಿ ತಿಳಿದು ಬಂದಿದೆ. 40 ಸೆಕೆಂಡ್‌ಗಳ ಕಾಲ ತೇಲುವ ಈ ಜೀವಿ ದಿಢೀರ್ ಎಂದು ಚೆಂಡಿನ ಆಕೃತಿಗೆ ತನ್ನ ದೇಹವನ್ನು ಮಡಚಿಕೊಂಡು ಬಿಡುತ್ತದೆ. ಕೆಲ ಸೆಕೆಂಡ್‌ಗಳ ಬಳಿಕ, ಮತ್ತೆ ತೆರೆದುಕೊಳ್ಳುತ್ತದೆ.