ನಿಮ್ಮ ಬೆಡ್‌ರೂಂ ಅಥವಾ ಲಿವಿಂಗ್ ರೂಂನಿಂದಲೇ ವರ್ಕ್ ಫ್ರಂ ಹೋಂನ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದಲ್ಲಿ ಕೆಲವೊಮ್ಮೆ ಮನೆಯಲ್ಲಿನ ಗದ್ದಲವು ಮೈಕ್ರೋಫೋನ್‌ನಲ್ಲಿ ಪಿಕ್ ಆಗಿ, ಆಫೀಸ್‌ನ ಸಹ ಸಿಬ್ಬಂದಿಗೆ ಕೇಳಿದಂತೆ ಆದರೆ ಅದೊಂಥರ ಕಿರಿಕಿರಿಯೇ ಸರಿ.
ಇಲ್ಲೊಬ್ಬ ಎಲೆಕ್ಟ್ರಿಷಿಯನ್, ಬಹಳ ಮುಖ್ಯವಾದ ಕೌನ್ಸಿಲ್ ಮೀಟಿಂಗ್ ವೇಳೆ ನೀಲಿಚಿತ್ರವೊಂದನ್ನು ಹಾಕಿಕೊಂಡು ನೋಡುತ್ತಿದ್ದಾಗ, ಅದರ ಸೌಂಡ್ ಮೀಟಿಂಗ್‌ನಲ್ಲಿ ಪ್ರತಿಧ್ವನಿಸಿಬಿಟ್ಟಿದೆ! ಸರಿ ಮುಂದೇನಾಯ್ತು ಎಂಬುದು ಅಚ್ಚರಿಯ ವಿಷಯವೇನಲ್ಲ ಬಿಡಿ.
ರೆಡ್ಡಿಚ್ ಬರೋ ಕೌನ್ಸಿಲ್‌ನಲ್ಲಿ ಕೆಲಸ ಮಾಡುವ ಡೇವಿಡ್ ವೆಸ್ಟ್ ಎಂಬ ಈತ, 100ಕ್ಕೂ ಹೆಚ್ಚು ಸಹೋದ್ಯೋಗಿಗಳೊಂದಿಗೆ ಆನ್ಲೈನ್ ಮೀಟಿಂಗ್‌ನಲ್ಲಿ ಇದ್ದ ವೇಳೆ ವಾಟ್ಸಾಪ್ ವಿಡಿಯೋವೊಂದನ್ನು ತೆರೆದುಬಿಟ್ಟಿದ್ದಾನೆ. ಅದರಲ್ಲಿ ಜೋಡಿಯೊಂದು ಸುಖದ ತುತ್ತತುದಿಯಲ್ಲಿದ್ದ ಶಬ್ದವು 30 ಸೆಕೆಂಡ್‌ಗಳ ಕಾಲ ಪ್ಲೇ ಆಗಿಬಿಟ್ಟಿದೆ. ಘಟನೆ ಬಳಿಕ ವೆಸ್ಟ್‌ನನ್ನು ಕೆಲಸದಿಂದ ಉಚ್ಛಾಟಿಸಲಾಗಿದೆ. ತನ್ನ ಈ ಉಚ್ಛಾಟನೆ ವಿರುದ್ಧ ಪ್ರಾಧಿಕಾರದಲ್ಲಿ ದಾವೆ ಹೂಡಿರುವ ವೆಸ್ಟ್, ಆ ಶಬ್ದವು ಬಾತುಕೋಳಿಯದ್ದು ಎಂದಿದ್ದಾನೆ.