ಬ್ರೆಜಿಲ್: ದೇಹ ರೂಪಾಂತರ ಅಥವಾ ಮೇಕ್ ಓವರ್ ಎಂಬ ಹೊಸ ಪದ್ಧತಿ ಇತ್ತೀಚೆಗೆ ಪ್ರಸಿದ್ಧವಾಗುತ್ತಿದೆ. ಶಸ್ತ್ರ ಚಿಕಿತ್ಸೆ ಮಾಡಿ, ಮುಖದ ರೂಪವನ್ನು ಬದಲಿಸುವ ಪದ್ಧತಿ ಇದಾಗಿದೆ. ಹೆಚ್ಚಾಗಿ ಚಿತ್ರ ನಟ, ನಟಿಯರು ತಾವು ಹೆಚ್ಚು ಸುಂದರವಾಗಿ ಕಾಣಲು ಈ ವಿಧಾನ ಬಳಸುತ್ತಾರೆ. ಆದರೆ, ಇಲ್ಲೊಬ್ಬ ಸುಂದರ ಮುಖವನ್ನು ವಿರೂಪ ಮಾಡಿಕೊಂಡಿದ್ದಾನೆ.
ಬ್ರೆಜಿಲ್ ದೇಶದ 44 ವರ್ಷದ ಮೈಕಲ್ ಫಾರೋ ಡೋ ಮೇಕ್ ಓವರ್ ನ ಹುಚ್ಚು ಹೊಂದಿರುವ ಒಬ್ಬ ವ್ಯಕ್ತಿಯಾಗಿದ್ದಾನೆ. ಮುಖದ ತುಂಬೆಲ್ಲ ಕಲೆ ಮಾಡಿಕೊಂಡು ಹಲ್ಲುಗಳನ್ನು ವಿರೂಪ ಮಾಡಿಕೊಂಡಿದ್ದಾನೆ. ಈಗ ಮೂಗನ್ನೂ ಕತ್ತರಿಸಿಕೊಂಡು ರಾಕ್ಷಸನಂತೆ ಮುಖವನ್ನೇ ಬದಲಾಯಿಸಿಕೊಂಡಿದ್ದಾನೆ.
ಮೈಕಲ್ ಸ್ವತಃ ಒಬ್ಬ ಟ್ಯಾಟೂ ಕಲಾವಿದ. ಆದರೆ, ಆತನ ದೇಹದ ಮೇಲೆ ಆತನೇ ಬಿಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಬೇರೆಯವರಿಂದ ಮೈ ತುಂಬೆಲ್ಲ ಟ್ಯಾಟು ಹಾಕಿಸಿಕೊಂಡಿದ್ದಾನೆ. ತನ್ನ ರೂಪಾಂತರದ ಶೋಕಿಗಾಗಿ ಆತ ಇದುವರೆಗೆ ಐದು ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾನೆ. ತನ್ನ ವಿಚಿತ್ರ ಸ್ವರೂಪದ ಫೋಟೋ, ವಿಡಿಯೋಗಳನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, 15 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.