ವಿಚಿತ್ರವಾದ ಹುಟ್ಟುಹಬ್ಬ ಆಚರಣೆಯ ವಿಡಿಯೋವೊಂದು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಯುವತಿಯೊಬ್ಬರು ಇನ್ನೇನು ಹುಟ್ಟುಹಬ್ಬದ ಕೇಕ್ ಕತ್ತರಿಸುತ್ತಿದ್ದಂತೆ ಕೇಕ್ ಸ್ಪೋಟಗೊಂಡು ಚೆಲ್ಲಾಪಿಲ್ಲಿಯಾಗಿದೆ.
ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಕಾಮೆಂಟ್ ಮಾಡಿ ಇಷ್ಟಪಟ್ಟಿದ್ದಾರೆ. ಈ ಟಿಕ್ ಟಾಕ್ ವಿಡಿಯೊದಲ್ಲಿ, ಯುವತಿಯೊಬ್ಬಳು ತನ್ನ ಹುಟ್ಟುಹಬ್ಬವನ್ನು ಪೂಲ್ ಮುಂಭಾಗ ಆಚರಿಸುತ್ತಿರುವುದನ್ನು ನೋಡಬಹುದು.
ಚಾಕೊಲೇಟ್ ಆವರಿಸಿರುವ ಕೇಕ್ ಮಾದರಿಯನ್ನು ಆಕೆ ಕತ್ತರಿಸುತ್ತಿದ್ದಂತೆ ಅಲ್ಲಿದ್ದವರೆಲ್ಲ ಹ್ಯಾಪಿಬರ್ತ್ ಡೇ ಎಂದು ಹಾಡುತ್ತಾರೆ. ಆದರೆ ಯುವತಿ ಕೇಕ್ ಮೇಲೆ ಚಾಕುವನ್ನು ಇರಿಸಿದಂತೆ ಅದು ಸಿಡಿಯುತ್ತದೆ. ಕೇಕ್, ವಾಸ್ತವದಲ್ಲಿ, ನೀರಿನಿಂದ ತುಂಬಿದ ಕೆಂಪು ಬಣ್ಣದ ಬಲೂನ್ ಆಗಿತ್ತು.
https://twitter.com/1ndls5/status/1283024605490352128?ref_src=twsrc%5Etfw%7Ctwcamp%5Etweetembed%7Ctwterm%5E1283024605490352128%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fbirthday-with-a-blast-tiktok-video-of-woman-cutting-into-her-cake-is-internets-favourite-prank-2722353.html