
ಗಾಳಿಯಲ್ಲಿ ತೇಲುತ್ತಾ, ಒಂದೇ ಕಡೆ ನಿಂತಿರುವ ಪಕ್ಷಿಯೊಂದರ ವಿಡಿಯೋವೊಂದನ್ನು ಕೊಲಂಬಿಯಾದ ಟುಲುವಾ ವಲ್ಲೆ ಎಂಬಲ್ಲಿ ಸೆರೆಹಿಡಿಯಲಾಗಿದೆ.
ಹೆಚಿಝೆರೋ ಎಂಬ ಬಳಕೆದಾರರು ಈ ವಿಡಿಯೋವನ್ನು ಮೊದಲ ಬಾರಿಗೆ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ತನ್ನ ರೆಕ್ಕೆಗಳನ್ನು ವಿಸ್ತರಿಸಿಕೊಂಡಿರುವ ಈ ಬಿಳಿ ಪಕ್ಷಿಯು ಒಂದೇ ಸ್ಥಾನದಲ್ಲಿ ಗಾಳಿಯಲ್ಲಿ ತೇಲುತ್ತಾ ನಿಂತಿರುವುದನ್ನು ಕಾಣಬಹುದಾಗಿದೆ.
ರಸ್ತೆಯಲ್ಲಿ ಓಡಾಡುತ್ತಿದ್ದ ಮಂದಿ, ಪಕ್ಷಿಯನ್ನು ಕಂಡು ಒಂದು ಕ್ಷಣ ವಿಸ್ಮಿತರಾಗಿ ನೋಡುತ್ತಿರುವುದನ್ನು ಕಾಣಬಹುದಾಗಿದೆ.
https://www.instagram.com/p/CCdgKudpCQB/?utm_source=ig_embed