ಕೊರೋನಾ ವೈರಸ್ ವಿಶ್ವದಲ್ಲಿ ರುದ್ರತಾಂಡವ ಆರಂಭಿಸಿ ಆರು ತಿಂಗಳಾಗುತ್ತ ಬಂದಿದೆ. ಮಾರಣಾಂತಿಕ ಕಾಯಿಲೆಯಿಂದ ಬಚಾವಾಗಲು ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಹಾಗೂ ಕೈಗೆ ಸ್ಯಾನಿಟೈಸರ್ ಹಚ್ಚಿಕೊಳ್ಳುವುದು ಅಥವಾ ಸೋಪಿನಿಂದ ಕೈ ತೊಳೆಯುವುದು ಪರಿಹಾರ ಎಂದು ಸಾರಿ ಸಾರಿ ಹೇಳಲಾಗುತ್ತಿದೆ.
ಮಾಸ್ಕ್ ಧರಿಸುವುದಕ್ಕೆ ಜನ ನಿಧಾನವಾಗಿ ಒಗ್ಗಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಇಂಥದ್ದರಲ್ಲೂ ಕೆಲವರು ನಾವು ಮಾಸ್ಕ್ ಏಕೆ ಧರಿಸಬೇಕು. ನಮಗೆ ರೋಗ ಹರಡದು ಎಂದು ಉದ್ಧಟತನ ತೋರುವವರೂ ಇದ್ದಾರೆ. ಬಿಲ್ ನ್ಯೇ ಎಂಬ ವೈಜ್ಞಾನಿಕ ಮನೋಭಾವದ ವ್ಯಕ್ತಿಯೊಬ್ಬರು ಸರಳ ವೈಜ್ಞಾನಿಕ ಪ್ರಯೋಗದ ಮೂಲಕ ಮಾಸ್ಕ್ ನ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ.
ಮೊದಲು ಅವರು ಮೇಣದ ಬತ್ತಿಯನ್ನು ತಮ್ಮೆದುರು ಹಚ್ಚಿಟ್ಟು ತಮ್ಮ ಸ್ಕಾರ್ಪ್ ಧರಿಸಿ ಗಾಳಿ ಊದುತ್ತಾರೆ. ಮೇಣದ ಬತ್ತಿಯ ಬೆಂಕಿಯ ಜ್ವಾಲೆ ಅಲ್ಲಾಡಿ ಆರಿ ಹೋಗುವ ಹಂತ ತಲುಪುತ್ತದೆ. ಎರಡನೇ ಬಾರಿ ಮನೆಯಲ್ಲೇ ತಯಾರಿಸಿದ ಬಟ್ಟೆಯ ಮಾಸ್ಕ್ ಧರಿಸಿ ಊದಿದಾಗ ಜ್ವಾಲೆ ಸ್ವಲ್ಪವಷ್ಟೇ ಅಲ್ಲಾಡುತ್ತದೆ. ನಂತರ ಎನ್- 95 ಮಾಸ್ಕ್ ಧರಿಸಿದಾಗ ಊದಿದರೂ ಜ್ವಾಲೆ ಅಲ್ಲಾಡುವುದೂ ಇಲ್ಲ.
ಮಾಸ್ಕ್ ಧರಿಸುವುದರಿಂದ ನಾವೂ ಸುರಕ್ಷಿತವಾಗಿರಬಹುದು, ನಮ್ಮಿಂದ ಇತರರೂ ಸುರಕ್ಷಿತವಾಗಿರಬಹುದು ಎಂದು ಅವರು ಸಂದೇಶವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
https://www.youtube.com/watch?time_continue=1&v=EV4IcXlpxcM&feature=emb_logo