ನ್ಯೂಯಾರ್ಕ್: ಕೋವಿಡ್ ನಂಥ ಒಂದು ಮಹಾ ಆಪತ್ತು ವಿಶ್ವಕ್ಕೆ ಅಪ್ಪಳಿಸಲಿದೆ ಎಂದು ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ 2015 ರಲ್ಲೇ ಊಹಿಸಿದ್ದರು.
2015 ರ ಟೆಡ್ ಟಾಕ್ ನಲ್ಲಿ ಅವರು “ದ ನೆಕ್ಸ್ಟ್ ಔಟ್ ಬ್ರೇಕ್ ವಿ ಆರ್ ನಾಟ್ ರೆಡಿ” ಎಂದು ಹೇಳಿದ್ದರು. ಯುದ್ಧ ಬಿಟ್ಟು ಬೇರೆ ಮಾರಣಕ್ಕೆ ಒಂದು ವೈರಸ್ ನಿಂದ ವಿಶ್ವದಲ್ಲಿ 10 ಮಿಲಿಯನ್ ಜನ ಸಾಯಬಹುದು ಎಂದು ಹೇಳಿದ್ದರು.
50 ವರ್ಷ ಮೇಲ್ಪಟ್ಟವರಿಗೆ ಈ ತಿಂಗಳಿನಿಂದ ಸಿಗಲಿದೆ ಕೊರೊನಾ ಲಸಿಕೆ
ಡಾರ್ಕ್ ಮುಲ್ಲರ್ ಎಂಬ ಯು ಟ್ಯೂಬರ್ ಇತ್ತೀಚೆಗೆ ಗೇಟ್ಸ್ ಅವರನ್ನು ಮಾತನಾಡಿಸಿದ್ದು, ನಿಮಗೆ ಹೇಗೆ ಇದು ಗೊತ್ತಾಗಿತ್ತು ಎಂದು ಕೇಳಿದ್ದಾರೆ. ಅದಕ್ಕೆ ಗೇಟ್ಸ್, ವಿಶ್ವದಲ್ಲಿ ನಿಗದಿತ ಅವಧಿಗೆ ಮಾನವನ ಶ್ವಾಸಕೋಶದ ಮೇಲೆ ದಾಳಿ ಮಾಡುವ ವೈರಸ್ ಗಳ ಅಟ್ಟಹಾಸ ನಡೆದೇ ಇದೆ. ಅಲ್ಲದೆ, ಪರಿಸರ ನಾಶವೂ ಇದಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದರು.