ಚೀನಾದಿಂದ ಹರಡಿದ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಆವರಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿನಿಂದ ಗುಣಮುಖರಾಗ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಕೊರೊನಾಕ್ಕೆ ವಿಶ್ವದಾದ್ಯಂತ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಈ ಎಲ್ಲದರ ಮಧ್ಯೆ ಕೊರೊನಾ ಬಗ್ಗೆ ವಿಜ್ಞಾನಿಗಳು ನೆಮ್ಮದಿ ಸುದ್ದಿಯೊಂದನ್ನು ನೀಡಿದ್ದಾರೆ.
ವಿಜ್ಞಾನಿಗಳ ಪ್ರಕಾರ ಒಮ್ಮೆ ಡೆಂಗ್ಯೂ ಆಗಿದ್ದವರಿಗೆ ಕೊರೊನಾ ಕಾಡುವುದಿಲ್ಲವಂತೆ. ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಹಾಗಾಗಿ ಕೊರೊನಾ ಅವ್ರಲ್ಲಿ ಕಾಡುವುದಿಲ್ಲವೆಂದು ಹೇಳಿದ್ದಾರೆ. ಅಧ್ಯಯನದಲ್ಲಿ ಬ್ರೆಜಿಲ್ ಉದಾಹರಣೆಯಾಗಿ ನೀಡಲಾಗಿದೆ. ಹಿಂದಿನ ವರ್ಷ ಬ್ರೆಜಿಲ್ ನಲ್ಲಿ ಡೆಂಗ್ಯೂ ಅನೇಕರನ್ನು ಕಾಡಿತ್ತು.
ಡ್ಯೂಕ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮಿಗುಯೆಲ್ ನಿಕೋಲಲ್ಸ್ ಡೆಂಗ್ಯೂ ಜ್ವರ ಮತ್ತು ಕೊರೊನಾ ನಡುವೆ ಪರಸ್ಪರ ಸಂಬಂಧವಿದೆ ಎಂದು ಹೇಳುತ್ತಾರೆ. ಈ ವರ್ಷ ಅಥವಾ ಕಳೆದ ವರ್ಷ ಡೆಂಗ್ಯೂ ಹರಡಿದ ಸ್ಥಳಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆ ಇದ್ದು, ಸೋಂಕು ಬಹಳ ನಿಧಾನವಾಗಿ ಹರಡುತ್ತಿದೆ ಎಂದು ನಿಕೋಲಲ್ಸ್ ಹೇಳಿದ್ದಾರೆ. ಡೆಂಗ್ಯೂ ಹರಡಿದ್ದ ಬ್ರೆಜಿಲ್ ನ ಕೆಲ ಭಾಗದಲ್ಲಿ ಕೊರೊನಾ ವೇಗ ನಿಧಾನವಾಗಿದೆ ಎಂದವರು ಹೇಳಿದ್ದಾರೆ.