ಕೊರೊನಾ ವೈರಸ್ ಬಗ್ಗೆ ದಿನಕ್ಕೊಂದು ಸಂಶೋಧನೆಗಳು ನಡೆಯುತ್ತಿವೆ. ಹ್ಯಾಂಡ್ ಸ್ಯಾನಿಟೈಜರ್ ಅಥವಾ ಸೋಪಿನಿಂದ ಸ್ವಚ್ಛವಾಗಿ ಕೈ ತೊಳೆಯುವುದ್ರಿಂದ ಕೊರೊನಾ ಸಾಯುತ್ತದೆ ಎಂದು ಈಗಾಗಲೇ ಹೇಳಲಾಗಿದೆ. ಈಗ ರಷ್ಯಾ ವಿಜ್ಞಾನಿಗಳು ನೀರಿನಲ್ಲಿ ಕೊರೊನಾ ಸಾಯಬಲ್ಲದು ಎಂದಿದ್ದಾರೆ.
72 ಗಂಟೆಯೊಳಗೆ ನೀರಿನಲ್ಲಿ ಕೊರೊನಾ ವೈರಸ್ ಸಂಪೂರ್ಣವಾಗಿ ನಿರ್ಮೂಲನೆಗೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಧ್ಯಯನದ ಪ್ರಕಾರ, ವೈರಸ್ ನೀರಿನ ತಾಪಮಾನವನ್ನು ನೇರವಾಗಿ ಅವಲಂಬಿಸಿರುತ್ತದೆ. ಶೇಕಡಾ 90 ರಷ್ಟು ವೈರಸ್ ಕಣಗಳು 24 ಗಂಟೆಗಳಲ್ಲಿ ಸಾಯುತ್ತವೆ. ಶೇಕಡಾ 99.9 ರಷ್ಟು ಕಣಗಳು ಕೋಣೆಯ ಸಾಮಾನ್ಯ ತಾಪಮಾನದಲ್ಲಿರುವ ನೀರಿನಲ್ಲಿ ಸಾಯುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕುದಿಯುವ ನೀರಿನಲ್ಲಿ ವೈರಸ್ ತಕ್ಷಣ ಸಾವನ್ನಪ್ಪುತ್ತದೆ. ಸ್ಟೇನ್ಲೆಸ್ ಸ್ಟೀಲ್, ಲಿನೋಲಿಯಮ್, ಗ್ಲಾಸ್, ಪ್ಲಾಸ್ಟಿಕ್ ಮತ್ತು ಸೆರಾಮಿಕ್ ಮೇಲ್ಮೈಗಳಲ್ಲಿ 48 ಗಂಟೆಗಳವರೆಗೆ ಕೊರೊನಾ ವೈರಸ್ ಸಕ್ರಿಯವಾಗಿರುತ್ತದೆ. ಈ ವೈರಸ್ ಒಂದೇ ಸ್ಥಳಕ್ಕೆ ಅಂಟಿಕೊಳ್ಳುವುದಿಲ್ಲ. ಮನೆಯ ಸೋಂಕು ನಿವಾರಕಗಳಿಂದಲೂ ಇದನ್ನು ಕೊಲ್ಲಬಹುದು ಎಂದು ಸಂಶೋಧಕರು ಹೇಳಿದ್ದಾರೆ.