ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್ -19 ಲಸಿಕೆಯ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಕೊರೊನಾ ಲಸಿಕೆ ಅಕ್ಟೋಬರ್‌ನಿಂದ ಅಮೆರಿಕಾದಾದ್ಯಂತ ವಿತರಣೆಯಾಗಲಿದೆ ಎಂದಿದ್ದಾರೆ. 2020 ರ ಅಂತ್ಯದ ವೇಳೆಗೆ ನೂರು ಮಿಲಿಯನ್ ಡೋಸ್‌ಗಳನ್ನು ವಿತರಿಸುವ ಅಂದಾಜಿದೆ ಎಂದು ಟ್ರಂಪ್ ಹೇಳಿದ್ದಾರೆ.
ಲಸಿಕೆಯನ್ನು ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ರೀತಿಯಲ್ಲಿ ತಲುಪಿಸಲು ಮತ್ತು ವಿತರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅಕ್ಟೋಬರ್‌ನಲ್ಲಿ ಲಸಿಕೆ ವಿತರಣೆ ಪ್ರಾರಂಭವಾಗಲಿದೆ ಎಂದು ನಾನು ಭಾವಿಸುತ್ತೇನೆ. ಅಕ್ಟೋಬರ್ ಮಧ್ಯಭಾಗದಲ್ಲಿ ಲಸಿಕೆ ಸುಗಮವಾಗುವ ಸಾಧ್ಯತೆಯಿದೆ ಎಂದು ಟ್ರಂಪ್ ಹೇಳಿದ್ದಾರೆ.ಲಸಿಕಾ ವಿರೋಧಿ ಸಿದ್ಧಾಂತ ಪ್ರಚಾರ ಮಾಡುವುದನ್ನು ಬಿಡಬೇಕೆಂದು ಟ್ರಂಪ್ ಹೇಳಿದ್ದಾರೆ.
ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಯುಎಸ್ ಸರ್ಕಾರ ಮತ್ತೊಂದು ಘೋಷಣೆ ಮಾಡಿದೆ. ಅಮೆರಿಕದ ತನ್ನೆಲ್ಲ ನಾಗರಿಕರಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದಿದೆ.