ವಿಶ್ವದ ನೂರಾರು ತಂಡಗಳು ಕೋವಿಡ್ -19 ಲಸಿಕೆ ತಯಾರಿಕೆಯಲ್ಲಿ ನಿರತವಾಗಿವೆ. ಆದರೆ ರಷ್ಯಾ, ಯುಕೆ, ಯುಎಸ್ ಮತ್ತು ಚೀನಾ ಲಸಿಕೆ ಕಂಡು ಹಿಡಿಯುವ ದಾರಿಯಲ್ಲಿ ಮುಂದೆ ಸಾಗಿವೆ. ಮುಂದಿನ ವರ್ಷದ ವೇಳೆಗೆ ಲಸಿಕೆ ಲಭ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಂಬಿದೆ. ಆದರೆ ಅಕ್ಟೋಬರ್‌ನಿಂದಲೇ ದೇಶದಲ್ಲಿ ಸಾಮೂಹಿಕ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದೇವೆ ಎಂದು ರಷ್ಯಾ ಅಚ್ಚರಿಯ ಹೇಳಿಕೆ ನೀಡಿದೆ.
ರಷ್ಯಾ ಮೊದಲು ಲಸಿಕೆಯನ್ನು ವೈದ್ಯರು ಮತ್ತು ಶಿಕ್ಷಕರಿಗೆ ನೀಡಲಿದೆ. ನಂತ್ರ ತುರ್ತು ಅಗತ್ಯವಿರುವವರಿಗೆ ನೀಡಲಿದೆ. ಎಲ್ಲಾ ಕ್ಲಿನಿಕಲ್ ಪ್ರಯೋಗಗಳು ಪೂರ್ಣಗೊಂಡಿವೆ. ಫಲಿತಾಂಶ ಸಾಕಷ್ಟು ಉತ್ತಮವಾಗಿದೆ ಎಂದು ರಷ್ಯಾ ಆರೋಗ್ಯ ಸಚಿವರು ಹೇಳಿದ್ದಾರೆ.
ಪ್ರಸ್ತುತ ಲಸಿಕೆ ನೋಂದಣಿ ಮತ್ತು ವಿತರಣೆಯ ಪ್ರಕ್ರಿಯೆಯಲ್ಲಿದೆ. ಅಕ್ಟೋಬರ್‌ನಿಂದ ಸಾಮೂಹಿಕ ವ್ಯಾಕ್ಸಿನೇಷನ್ ಪ್ರಾರಂಭಿಸುತ್ತೇವೆ ಎಂದು ರಷ್ಯಾ ಹೇಳಿದೆ. ಲಸಿಕೆ ಮೊದಲು ವೈದ್ಯರು ಮತ್ತು ಶಿಕ್ಷಕರಿಗೆ ಲಭ್ಯವಾಗಲಿದೆ. ರಷ್ಯಾದ ಆತುರದ ಬಗ್ಗೆ ಅನೇಕ ದೇಶಗಳ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ರಷ್ಯಾ ಲಸಿಕೆ ಪರೀಕ್ಷೆಯನ್ನು ತರಾತುರಿಯಲ್ಲಿ ನಡೆಸಿದೆ ಎನ್ನಲಾಗ್ತಿದೆ.