ಕೊರೊನಾ ಸೋಂಕಿಗೆ ಲಸಿಕೆ ಯಾವಾಗ ಬರುತ್ತೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ಈ ಮಧ್ಯೆ ರಷ್ಯಾ ಅಧ್ಯಕ್ಷ ಆಗಸ್ಟ್ 11 ರಂದು ರಷ್ಯಾ ಲಸಿಕೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದಿದ್ದರು. ಇದಕ್ಕೆ ಅಚ್ಚರಿ ವ್ಯಕ್ತವಾಗಿತ್ತು. ಈಗ ರಷ್ಯಾ ಮತ್ತೊಂದು ಸುದ್ದಿ ನೀಡಿದೆ. ಈ ವಾರ ಕೊರೊನಾ ಲಸಿಕೆ ಜನಸಾಮಾನ್ಯರಿಗೆ ಲಭ್ಯವಾಗಲಿದೆಯಂತೆ.
ರಷ್ಯಾದ ಉನ್ನತ ಅಧಿಕಾರಿಯೊಬ್ಬರು ಈ ವಾರ ಕೊರೊನಾ ವೈರಸ್ ಲಸಿಕೆ ‘ಸ್ಪುಟ್ನಿಕ್ ವಿ’ ಸಾಮಾನ್ಯ ನಾಗರಿಕರಿಗೆ ಸಿಗಲಿದೆ ಎಂದಿದ್ದಾರೆ. ಆರೋಗ್ಯ ಸಚಿವಾಲಯವು ಈ ಲಸಿಕೆಯ ಪರೀಕ್ಷೆಯನ್ನು ಪ್ರಾರಂಭಿಸಿದೆ. ಶೀಘ್ರದಲ್ಲೇ ಅಂತಿಮ ಹಂತ ತಲುಪಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆರೋಗ್ಯ ಸಚಿವಾಲಯವು ಈ ಲಸಿಕೆಯ ಪರೀಕ್ಷೆಯನ್ನು ಪ್ರಾರಂಭಿಸಲಿದ್ದು, ಶೀಘ್ರದಲ್ಲೇ ಅನುಮತಿ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಗೆ ಲಸಿಕೆ ನೀಡಲು ಸೂಕ್ತ ವಿಧಾನವಿದೆ. ಸೆಪ್ಟೆಂಬರ್ 10ರಿಂದ 13ರವರೆಗೆ ಲಸಿಕೆ ಪಡೆಯಲು ಅನುಮತಿ ನೀಡಲಾಗುವುದು. ನಂತ್ರ ನಾಗರಿಕರಿಗೆ ಲಸಿಕೆ ನೀಡಲಾಗುವುದು. ಈ ಲಸಿಕೆಯ ಎರಡು ಪ್ರಯೋಗಗಳನ್ನು ಈ ವರ್ಷ ಜೂನ್-ಜುಲೈನಲ್ಲಿ ನಡೆಸಲಾಯಿತು. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಕಂಡು ಬಂದಿದೆ.