ಕೊರೊನಾ ವೈರಸ್ ವಿಶ್ವಕ್ಕೆ ಅಪ್ಪಳಿಸಿದ ಒಂದು ವರ್ಷದ ಬಳಿಕ ಭೂತಾನ್ ಮೊದಲ ಕೊರೊನಾ ವೈರಸ್ ಸಾವನ್ನ ದಾಖಲಿಸಿದೆ.
ದೀರ್ಘಕಾಲದ ಯಕೃತ್ತಿನ ಕಾಯಿಲೆ ಹೊಂದಿದ್ದ 34 ವರ್ಷದ ವ್ಯಕ್ತಿ, ರಾಜಧಾನಿ ಥಿಂಪುವಿನ ಆಸ್ಪತ್ರೆಯಲ್ಲಿ ಡಿಸೆಂಬರ್ 23ರಂದು ಕೊರೊನಾ ವೈರಸ್ ಸೋಂಕಿಗೆ ಗುರಿಯಾಗಿದ್ದರು. ಇದೀಗ ಈ ರೋಗಿ ಸಾವನ್ನಪ್ಪಿದ್ದು ಆರೋಗ್ಯ ಸಚಿವಾಲಯ ಅವರ ಸಾವನ್ನ ಅಪಾರ ದುಃಖದಿಂದ ಘೋಷಣೆ ಮಾಡಿದೆ.
ಭಾರತ ಹಾಗೂ ಚೀನಾ ನಡುವೆ ಇರುವ ಈ ಸಣ್ಣ ರಾಷ್ಟ್ರವು ಕಳೆದ ವರ್ಷ ಮಾರ್ಚ್ನಿಂದ ಎಲ್ಲಾ ವಿಮಾನಯಾನಗಳನ್ನ ನಿಷೇಧಿಸಿದೆ. ಕಳೆದ ಹಲವಾರು ತಿಂಗಳಿನಿಂದ ಇಲ್ಲಿ ಯಾವುದೇ ವಿದೇಶಿ ಪ್ರವಾಸಿಗರು ಬಂದಿಲ್ಲ ಅಂತಾ ಸರ್ಕಾರ ಸ್ಪಷ್ಟನೆ ನೀಡಿದೆ.