ಕೊರೊನಾ ಸೋಂಕಿನ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ರೋಗಿ ಕೆಮ್ಮಿದ್ರೆ, ಸೀನಿದ್ರೆ ಸೋಂಕು ವೇಗವಾಗಿ ಹರಡುತ್ತದೆ. ಇದೇ ಕಾರಣಕ್ಕೆ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಬ್ರಿಟನ್ ವಿಜ್ಞಾನಿಗಳು ಹೊಸ ವಿಷ್ಯವನ್ನು ಹೇಳಿದ್ದಾರೆ.
ಕೊರೊನಾ ರೋಗಿ ಮಾತನಾಡಿದ್ರೆ ಅಥವಾ ಉಸಿರಾಡಿದ್ರೆ ಸೋಂಕು ಹರಡುತ್ತದೆ ನಿಜ. ಆದ್ರೆ ಕೆಮ್ಮಿಗಿಂತ ಹೆಚ್ಚಾಗಿ ಹಾಡು ಹಾಡಿದ್ರೆ ಸೋಂಕು ವೇಗವಾಗಿ ಹೊರಗೆ ಬರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಸೋಂಕಿತ ಹಾಡು ಹಾಡಿದ್ರೆ ಹೆಚ್ಚು ಅಪಾಯಕಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸಾರ್ವಜನಿಕ ಪ್ರದೇಶದಲ್ಲಿ ಹಾಡು ಹಾಡ್ತಿದ್ದರೆ ಅವ್ರಿಂದ ದೂರವಿರಿ. ಹಾಗೆ ಸಂಗೀತ ಕಾರ್ಯಕ್ರಮಗಳಿಗೆ ಹೋಗುವುದನ್ನು ತಪ್ಪಿಸಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.