ಮೂರುವರೆ ದಶಕದ ದೀರ್ಘಾವಧಿಯ ಬೆಸ್ಟ್ ಫ್ರೆಂಡ್ ಗಳಿಬ್ಬರು ಕೊರೊನಾ ವೈರಸ್ ಗೆ ಒಟ್ಟಿಗೆ ಬಲಿಯಾಗಿದ್ದಾರೆ.
ಮದುವೆ ಸಂದರ್ಭದಲ್ಲಿ ಜೀವಿತಾವಧಿವರೆಗೆ ಬೇರ್ಪಡದಿರಲಿ ಎಂದೇ ಕೋರಲಾಗುತ್ತದೆ. ಆ ಕೋರಿಕೆಗೆ ಅನ್ವರ್ಥ ಆಗುವಂತೆ ಅವರಿಬ್ಬರೂ ಹನ್ನೊಂದು ದಿನಗಳ ಅಂತರದಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ.
ಅಮೆರಿಕದ ಮಾಜಿ ಪೋಸ್ಟಲ್ ಕೆಲಸಗಾರ ಕೀತ್ ರಾಬಿನ್ಸನ್ ಗೆ 62 ವರ್ಷ, ಮಧುಮೇಹ. ಸಮಸ್ಯೆ ಹೊಂದಿದ್ದರು. ಅವರ ಪತ್ನಿ 60 ವರ್ಷದ ಗ್ವೆಂಡೋಲಿನ್ ಅಸ್ತಮಾ ಮತ್ತು ಬ್ಲಡ್ ಕ್ಯಾನ್ಸರ್ ಪೀಡಿತರಾಗಿದ್ದರು.
ಕೀತ್ ರಾಬಿನ್ಸನ್ ಕೊರೊನಾಗೆ ಪತ್ನಿ ಬಲಿಯಾದ ಹನ್ನೊಂದು ದಿನಕ್ಕೆ ಇಹಲೋಕ ತ್ಯಜಿಸಿದರು. ಜುಲೈ 14 ರಂದು ಗ್ವೆಂಡೋಲಿನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೆ, ಜುಲೈ 12 ರಂದು ಕೀತ್ ಅವರನ್ನು ದಾಖಲಿಸಲಾಗಿತ್ತು. ಗ್ವೆಂಡೋಲಿನ್ ಜುಲೈ 18 ರಂದು, ನಂತರ ಜುಲೈ 29 ರಂದು ಕೀತ್ ನಿಧನರಾದರು.