alex Certify ಕುದುರೆಗೆ ಕ್ಯಾರೆಟ್ ತಿನ್ನಿಸಲು ಓಡೋಡಿ ಬರುತ್ತೆ ಈ ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುದುರೆಗೆ ಕ್ಯಾರೆಟ್ ತಿನ್ನಿಸಲು ಓಡೋಡಿ ಬರುತ್ತೆ ಈ ಶ್ವಾನ…!

ದೊಡ್ಡ ಪ್ರಾಣಿಗಳನ್ನು ಕಂಡರೆ ಚಿಕ್ಕ ಪ್ರಾಣಿಗಳು ಹೆದರುವುದುಂಟು. ಅದರಲ್ಲೂ ನಾಯಿಯಂತೂ ಬೊಗಳುವುದಕ್ಕೇ ಶುರು ಮಾಡಿಬಿಡುತ್ತದೆ.

ಆದರೆ, ಅಮೆರಿಕಾದ ಬ್ಯಾಸ್ಕೆಟ್ ಬಾಲ್ ಮಾಜಿ ಆಟಗಾರ ರೆಕ್ಸ್ ಚಾಂಪ್ಮೆನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನಾಯಿ, ಕುದುರೆಗೆ ಕ್ಯಾರೆಟ್ ತಿನ್ನಿಸುವ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಕುದುರೆಯೊಂದಿಗೆ ಗೆಳೆತನ ಮಾಡಿರುವ ನಾಯಿ, ನಿತ್ಯ ಬೆಳಗ್ಗೆ ಕ್ಯಾರೆಟ್ ತೆಗೆದುಕೊಂಡು ಹೋಗಿ ಕುದುರೆಗೆ ತಿನ್ನಿಸುತ್ತದೆ.‌ ಕುದುರೆ ಕೂಡ ಅದಕ್ಕಾಗಿ ಕಾಯುತ್ತಿರುತ್ತದಂತೆ.

ಬಾಯಲ್ಲಿ ಕ್ಯಾರೆಟ್ ಒಂದನ್ನು ಹಿಡಿದು ಓಡೋಡಿ ಬರುವ ನಾಯಿ, ಕುದುರೆ ಮುಂದೆ ನಿಲ್ಲುತ್ತದೆ.‌ ಅದರ ಬಾಯಲ್ಲಿರುವ ಕ್ಯಾರೆಟ್ ಪಡೆಯುವ ಕುದುರೆ ತಿಂದು ನಗೆ ಚೆಲ್ಲುತ್ತದೆ. ಈ ವಿಡಿಯೋ ಕಂಡ ನೆಟ್ಟಿಗರು, ಮುದ್ದಾದ ಪ್ರಾಣಿಗಳ ಈ ಚಿನ್ನಾಟಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2.2 ಲಕ್ಷ ಜನರು ವಿಡಿಯೋ ವೀಕ್ಷಿಸಿದ್ದು, 1.2 ಲಕ್ಷ ಮಂದಿ ಮೆಚ್ಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...