
ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಫೇಮಸ್ ವಿಡಿಯೋಗಳಲ್ಲಿ ನಾಯಿಗಳ ವಿಡಿಯೋಗಳು ಸದಾ ಮುಂದು. ಸಖತ್ ಕ್ಯೂಟ್ ಆಗಿರುವ ನಾಯಿಗಳು ತಮ್ಮ ತುಂಟುತನ ಅಥವಾ ಚತುರಮತಿಯಿಂದ ಒಂದಿಲ್ಲೊಂದು ಅಚ್ಚರಿದಾಯಕ ಕೆಲಸ ಮಾಡುವ ಸಾಕಷ್ಟು ವಿಡಿಯೋಗಳು ಪ್ರತಿದಿನ ಲೆಕ್ಕವಿಲ್ಲದಷ್ಟು ಅಪ್ಲೋಡ್ ಆಗುತ್ತವೆ.
ಪಾರ್ಕಿಂಗ್ ಸೆನ್ಸರ್ ಆಗಿ ಕೆಲಸ ಮಾಡುತ್ತಿರುವ ಶ್ವಾನವೊಂದರ ಕ್ಯೂಟ್ ವಿಡಿಯೋ ನೆಟ್ಟಿಗರಿಗೆ ಸಖತ್ ಇಷ್ಟವಾಗಿಬಿಟ್ಟಿದೆ. ’ಹ್ಯೂಮರ್ ಅಂಡ್ ಅನಿಮಲ್ಸ್’ ಹೆಸರಿನ ಟ್ವಿಟರ್ ಹ್ಯಾಂಡಲ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ಹಿಂದಕ್ಕೆ ಬರುತ್ತಿರುವ ಕಾರಿನ ಚಾಲಕರಿಗೆ ಯಾವಾಗ ನಿಲ್ಲಿಸಬೇಕೆಂದು ತನ್ನದೇ ಭಾಷೆಯಲ್ಲಿ ಈ ನಾಯಿ ಹೇಳುವುದನ್ನು ನೋಡುವುದೇ ಚಂದ.
ಕೊರೊನಾ ವಾರಿಯರ್ಸ್ ಎಂದು ಹಣೆಪಟ್ಟಿ; ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡದೇ ವಂಚನೆ; ರಾಜ್ಯ ಸರ್ಕಾರದ ವಿರುದ್ಧ ಹೆಚ್ ಡಿ ಕೆ ಆಕ್ರೋಶ
ಗೋಲ್ಡನ್ ರಿಟ್ರೈವರ್ ಶ್ವಾನದ ಈ ವಿಡಿಯೋಗೆ, “ನೀವು ಕಂಡುಕೊಳ್ಳಬಹುದಾದ ಬೆಸ್ಟ್ ಪಾರ್ಕಿಂಗ್ ಸೆನ್ಸರ್” ಎಂದು ಕ್ಯಾಪ್ಷನ್ ಕೊಡಲಾಗಿದೆ.
https://twitter.com/humorandanimals/status/1395032443393085442?ref_src=twsrc%5Etfw%7Ctwcamp%5Etweetembed%7Ctwterm%5E1395032443393085442%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fdog-helps-owner-to-park-vehicle-video-goes-viral-3757796.html