ಕೊರೊನಾ ವೈರಸ್ ವಿವಿಧ ವೃತ್ತಿಯವರನ್ನು ಹಿಂಡಿ ಹಿಪ್ಪೆ ಮಾಡಿದೆ. ಅದರಲ್ಲೂ ಕಲಾವಿದರ ಗೋಳು ಕೇಳುವಂತೆಯೇ ಇಲ್ಲವಾಗಿದೆ.
ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಬೆಲ್ಜಿಯಂನ ಪಾಪ್ ಸಿಂಗರ್ ಡಾನಾ ರೆಕ್ಸಾ ತಮ್ಮ ಸಂಕಟವನ್ನು ಹೇಳಿಕೊಂಡಿದ್ದು, ಕಾರ್ಯಕ್ರಮಗಳು ಇಲ್ಲದೆ, ಪ್ರವಾಸ ಮಾಡಲು ಸಾಧ್ಯವಾಗದೆ ತಾವು ಕಚೇರಿ ಕೆಲಸಕ್ಕೆ ಸೀಮಿತಗೊಂಡಿದ್ದಾರಂತೆ.
ಯೂರೋಪ್ ನಲ್ಲಿ ಕೊರೊನಾ ಔಟ್ ಬ್ರೇಕ್ ಆಗುವ ಮುನ್ನ ಅಂದರೆ ನಾಲ್ಕು ತಿಂಗಳ ಹಿಂದೆ ಏಷ್ಯಾ ಪ್ರವಾಸ ಮತ್ತು ಚೊಚ್ಚಲ ಆಲ್ಬಮ್ ಬಿಡುಗಡೆಯ ಬಗ್ಗೆ ಮಾತುಕತೆ ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಯಾವುದೇ ಕಾರ್ಯಕ್ರಮ ನೀಡಿಲ್ಲ, ಪ್ರವಾಸ ಮಾಡಲು ಸಾಧ್ಯವಾಗಿಲ್ಲ. ಈಗ ಅನಿವಾರ್ಯವಾಗಿ ಫ್ರೀ ಲ್ಯಾನ್ಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರಂತೆ. ಜುಲೈ ವೇಳೆಗೆ ಲಾಕ್ಡೌನ್ ಸಡಿಲಗೊಂಡು ಮತ್ತೆ ವೇದಿಕೆ ಏರಬಹುದು ಎಂಬ ಆಶಯವಿದೆ. ಹೀಗಾಗಿ ನಾನು ಪ್ರಮೋಟರ್ಸ್ ಮತ್ತು ಬುಕಿಂಗ್ ಮಾಡಿಕೊಳ್ಳುವವರಿಗೆ ನನ್ನ ಲಭ್ಯತೆಯ ಬಗ್ಗೆ ಇಮೇಲ್ ಕಳಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.