ಬೆಲ್ಜಿಯಂನ ಡೆನ್ಬರ್ಗ್ ಪುರಸಭೆ ಮೇಯರ್ ಕ್ರಿಸ್ಮಸ್ ವಿಶೇಷವಾಗಿ ಇಡೀ ನಗರವನ್ನ ದೀಪದಿಂದ ಅಲಂಕಾರ ಮಾಡಲು ಹೋಗಿ ಯಡವಟ್ಟು ಮಾಡಿದ್ದಾರೆ.
ಪುರಸಭೆ ಕ್ರಿಸ್ಮಸ್ ವಿಶೇಷವಾಗಿ ಮೇಣದ ಬತ್ತಿ ಆಕೃತಿಯಲ್ಲಿ ನಗರವನ್ನ ಸಿಂಗಾರ ಮಾಡುವ ಉದ್ದೇಶ ಹೊಂದಿತ್ತು. ಆದರೆ ಅದರಂತೆ ತಾಂತ್ರಿಕ ವಿಭಾಗ ನಗರದಾದ್ಯಂತ ದೀಪಗಳನ್ನ ಅಲಂಕರಿಸಿದೆ. ಕಂಬದ ಮೇಲ್ಭಾಗದಲ್ಲಿ ಜ್ವಾಲೆ ಕಾಣಬೇಕೆಂಬ ಉದ್ದೇಶದಿಂದ ನೀಲಿ ಬಣ್ಣದ ದೀಪದಿಂದ ಅಲಂಕರಿಸಲಾಗಿತ್ತು, ಆದರೆ ಇದು ಕ್ಯಾಂಡಲ್ನಂತೆ ಕಾಣುವ ಬದಲಾಗಿ ಪುರುಷರ ಶಿಶ್ನದಂತೆ ಭಾಸವಾಗುತ್ತಿದೆ.
ಸ್ಥಳೀಯರಿಗೆ ಈ ವಿಚಾರ ಗೊತ್ತಾದ ಬಳಿಕ ಮೇಯರ್ವರೆಗೂ ವಿಷಯ ಮುಟ್ಟಿಸಲಾಯ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮೇಯರ್ ಆಂಥೋನಿ ಡುಮಾರೆ. ಉದ್ದೇಶಪೂರ್ವಕವಾಗಿ ಈ ರೀತಿಯ ಆಕೃತಿಯನ್ನ ನಿರ್ಮಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕ್ರಿಸ್ಮಸ್ ಹಬ್ಬಕ್ಕಾಗಿ ನಗರವನ್ನ ಸಿಂಗಾರ ಮಾಡಬೇಕು ಎಂದುಕೊಂಡಿದ್ದ ನಾವು ಶಿಶ್ನದ ಆಕಾರದ ದೀಪ ತಯಾರಿಸಬೇಕೆಂಬ ಉದ್ದೇಶ ಹೊಂದಿರಲಿಲ್ಲ. ಬೆಳಗ್ಗೆ ನಾನು ಈ ದೀಪವನ್ನ ನೋಡಿದ್ದಾಗ ನನಗಿದು ಅನುಭವಕ್ಕೆ ಬಂದಿರಲಿಲ್ಲ. ರಾತ್ರಿ ದೀಪದ ಅಲಂಕಾರ ನೋಡುತ್ತಿದ್ದಾಗ ಈ ಪ್ರಮಾದ ನನ್ನ ಗಮನಕ್ಕೆ ಬಂದಿದೆ ಅಂತಾ ಹೇಳಿದ್ರು.
ಕೊರೊನಾ ವೈರಸ್ನಿಂದಾಗಿ ಜನರು ನಗೋದನ್ನೇ ಮರೆತುಬಿಟ್ಟಿದ್ದಾರೆ. ಇದೀಗ ಈ ದೀಪಗಳ ವಿಚಿತ್ರ ಅಲಂಕಾರವನ್ನ ನೋಡಿಯಾದರೂ ಜನ ತಮಾಷೆ ಮಾಡಿಕೊಂಡು ನಗಲಿ. ಹೀಗಾಗಿ ಈ ಅಲಂಕಾರವನ್ನ ಬದಲಾವಣೆ ಮಾಡಲ್ಲ ಎಂದು ಹೇಳಿದ್ದಾರೆ.