ಕೊರೊನಾ ವೈರಸ್ ಲಸಿಕೆ ಮೊದಲು ಕಂಡು ಹಿಡಿದ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಗಿದೆ. ರಷ್ಯಾ ತನ್ನ ಲಸಿಕೆಯನ್ನು ಈಗ ಬೆಲಾರಸ್ ದೇಶಕ್ಕೆ ನೀಡಲಿದೆ. ರಷ್ಯಾದ ಲಸಿಕೆ ಪಡೆಯುವ ಮೊದಲ ದೇಶವಾಗಲಿದೆ ಬೆಲಾರಸ್.
ವರದಿ ಪ್ರಕಾರ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೊದಲ ಬ್ಯಾಚ್ ಲಸಿಕೆಯನ್ನು ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊಗೆ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ. ಇಬ್ಬರು ನಾಯಕರು ದೂರವಾಣಿಯಲ್ಲಿ ಮಾತನಾಡಿದ್ದಾರೆ. ಈ ಸಮಯದಲ್ಲಿ ಬೆಲಾರಸ್‌ನಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ.
ಬೆಲಾರಸ್ ನ ಸ್ವಯಂಸೇವಕರಿಗೆ ಮಾತ್ರ ಲಸಿಕೆ ಸಿಗಲಿದೆ. ರಷ್ಯಾ ಇನ್ನೂ ಮೂರನೇ ಹಂತದ ಪರೀಕ್ಷೆ ನಡೆಸಿಲ್ಲ. ಪರೀಕ್ಷೆ ಮೊದಲೇ ಲಸಿಕೆ ಯಶಸ್ವಿಯಾಗಿದೆ ಎಂಬ ಘೋಷಣೆ ಮಾಡಿದೆ.